ಮೆಲ್ಬೋರ್ನ್: ವಿಮಾನವೊಂದು ಶಾಪಿಂಗ್ ಮಾಲ್‍ಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಮೆಲ್ಬೋರ್ನ್‍ನ ಎಸ್ಸೆಂಡನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಬೀಚ್‍ಕ್ರಾಫ್ಟ್ ಸೂಪರ್‍ಕಿಂಗ್ ಏರ್ 200 ವಿಮಾನ ಹತ್ತಿರದಲ್ಲೇ ಇದ್ದ ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನದಲ್ಲಿದ್ದ ಪೈಲೆಟ್ ಹಾಗೂ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಎಂಜಿನ್ ಸಮಸ್ಯೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
- Advertisement
ವಿಮಾನದಲ್ಲಿದ್ದ ಪ್ರಯಾಣಿಕರು ಅಮೆರಿಕದವರಾಗಿದ್ದು ತಸ್ಮಾನಿಯಾದ ಕಿಂಗ್ ದ್ವೀಪಕ್ಕೆ ಗಾಲ್ಫ್ ಆಡಲು ತೆರಳುತ್ತಿದ್ದರು. ವಿಮಾನದ ಪೈಲೆಟ್ ಮ್ಯಾಕ್ ಕ್ವಾರ್ಟರ್‍ಮೈನ್‍ಗೆ ಪೈಲೆಟ್ ಆಗಿ ದಶಕಗಳ ಅನುಭವವಿತ್ತು ಎಂದು ಪತ್ರಿಕೆಗಳು ವರದಿ ಮಾಡಿವೆ.
- Advertisement
ಶಾಪಿಂಗ್ ಮಾಲ್ 10 ಗಂಟೆಗೆ ತೆರೆಯಬೇಕಿದ್ದರಿಂದ ಘಟನೆ ನಡೆದಾಗ ಮಾಲ್‍ನೊಳಗೆ ಗ್ರಾಹಕರಿರಲಿಲ್ಲ. ಅಲ್ಲದೆ ಮಾಲ್‍ನ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮಾಲ್‍ನವರು ಹೇಳಿಕೆ ನೀಡಿದ್ದಾರೆ. ಘಟನೆಯಿಂದ ಮಾಲ್‍ನ ಚಾವಣಿಗೆ ಹಾನಿಯಾಗಿದೆ. 60ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯ ನಿರ್ವಹಿಸಿ ಬೆಂಕಿ ನಂದಿಸಿದ್ದಾರೆ.
ವಿಮಾನ ಶಾಪಿಂಗ್ ಮಾಲ್‍ಗೆ ಅಪ್ಪಳಿಸುವ ದೃಶ್ಯ ಕಾರ್‍ವೊಂದರ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ.
Five people feared dead after Essendon plane tragedy https://t.co/2FWn5Ui12w pic.twitter.com/houvQ8pZgu
— 3AW Melbourne (@3AW693) February 21, 2017