ನವದೆಹಲಿ: ಸ್ಪೈಸ್ ಜೆಟ್ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಒಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿರೋ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ದೆಹಲಿಯಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕ್ ಆಫ್ ಆಗಲು ತಯಾರಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪಾರ್ಕಿಂಗ್ ಸ್ಥಳದ ಬಳಿ ಸ್ಪೈಸ್ ಜೆಟ್ ವಿಮಾನ ಬಂದಿದ್ದು, ವಿಮಾನದ ಜೆಟ್ ಬ್ಲಾಸ್ಟ್ ನಿಂದಾಗಿ ಇಂಡಿಗೋ ವಿಮಾನದ ಕಿಟಕಿ ಒಡೆದು ಚೂರಾಗಿದೆ.
Advertisement
ಘಟನೆಯಲ್ಲಿ ಐವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಮಾನ ನಿಲ್ದಾಣದ ಕ್ಲೀನಿಕ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ನಾಗರೀಕ ವಿಮಾನಯಾನ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
Advertisement
ಪ್ರಯಾಣಿಕರು ವಿಮಾನವೇರಲು ಇಂಡಿಗೋ ಕೋಚ್ ನಂ. 34ನ್ನು 17ನೇ ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಇದೇ ವೇಳೆ ಸ್ಪೈಸ್ ಜೆಟ್ ಎಸ್‍ಜಿ-253 ವಿಮಾನ ನಿರ್ದಿಷ್ಟ ಸಾಲಿನಲ್ಲಿ ಪಾರ್ಕ್ ಮಾಡಲು ಟರ್ನ್ ತೆಗೆದುಕೊಳ್ತಿತ್ತು. ಈ ಸಂದರ್ಭದಲ್ಲಿ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಗಾಜು ಒಡೆದುಹೋಯ್ತು ಎಂದು ಇಂಡಿಗೋ ಹೇಳಿಕೆ ನೀಡಿದೆ.
Advertisement
ಜೆಟ್ ಬ್ಲಾಸ್ಟ್ ಅಂದ್ರೇನು?: ಟೇಕ್ ಆಫ್ ಗಿಂತ ಮೊದಲು ಅಥವಾ ಟೇಕ್ ಆಫ್ ಆಗುವ ವೇಳೆ ವಿಮಾನದ ಎಂಜಿನ್ ಬಲವಾದ ಗಾಳಿಯನ್ನ ಹೊರಕ್ಕೆ ತಳ್ಳುವುದನ್ನ ಜೆಟ್ ಬ್ಲಾಸ್ಟ್ ಅಂತಾರೆ.