ಭವನೇಶ್ವರ್: ಒಡಿಶಾದ ಹಾಸ್ಟೆಲ್ ವೊಂದರ ಆವರಣದಲ್ಲಿ ಭಾನುವಾರ 5 ಅಡಿ ಉದ್ದದ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ.
ಈ ಹಾಸ್ಟೆಲ್ ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಬರಿಪಡ ನಗರದಲ್ಲಿದೆ. ವಿದ್ಯಾರ್ಥಿನಿಯೊಬ್ಬಳ ಬಳಿಯಲಿದ್ದ ಹಾವನ್ನು ಗಮನಿಸಿದ ಆಕೆಯ ಸಹಪಾಠಿ ಆಕೆಯನ್ನು ಕೂಡಲೇ ಪಾರು ಮಾಡಿದ್ದಾರೆ. ಇದರಿಂದ ಇಬ್ಬರೂ ಬೆಚ್ಚಿಬಿದ್ದಿದ್ದು, ಜೋರಾಗಿ ಕಿರುಚಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಚೀರಾಟ ಕೇಳಿದ ಹಾಸ್ಟೆಲ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಏನಾಯ್ತು ಅನ್ನೋವಷ್ಟರಲ್ಲಿ ಹಾವು ಹೆಡೆ ಎತ್ತಿರುವುದು ಕಂಡು ಬಂದಿದೆ. ಹಾವನ್ನು ನೋಡಿ ಗಾಬರಿಗೊಂಡ ಸಿಬ್ಬಂದಿ ಕೂಡಲೇ ಸ್ಥಳೀಯ ಫೇಮಸ್ ಉರಗತಜ್ಞರಿಗೆ ಮಾಹಿತಿ ರವಾನಿಸಿದ್ದಾರೆ.
Advertisement
Advertisement
ಮಾಹಿತಿ ಪಡೆದ ಉರಗತಜ್ಞ ಕೃಷ್ಣಚಂದ್ರ ಗೊಚ್ಚಾಯಟ್ ಕೂಡಲೇ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಬಂದು ಫಿಶಿಂಗ್ ನೆಟ್ ಮೂಲಕ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಉರಗ ತಜ್ಞರು ಹಾವನ್ನು ಹಿಡಿದ ಬಳಿಕ ವಿದ್ಯಾರ್ಥಿನಿಯರು ನಿಟ್ಟಿಸಿರು ಬಿಟ್ಟಿದ್ದಾರೆ.
Advertisement
ಸಾಮಾನ್ಯವಾಗಿ ನಾಗರಹವುಗಳು ಯಾರಿಗೂ ತೊಂದರೆ ಕೊಡಲ್ಲ. ಆದ್ರೆ ಅವುಗಳಿಗೆ ಮನುಷ್ಯರು ತೊಂದ್ರೆ ಅಥವಾ ಕೆರಳಿಸಿದ್ರೆ ಕೊಟ್ರೆ ಮಾತ್ರ ತಿರುಗಿ ಬೀಳುತ್ತವೆ. ಹಾವನ್ನು ಈಗಾಗಲೇ ಸೆರೆಹಿಡಿಯುವ ಮೂಲಕ ರಕ್ಷಿಸಲಾಗಿದೆ ಅಂತ ಕೃಷ್ಣಚಂದ್ರ ಗೊಚ್ಚಾಯಟ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv