ಯಾದಗಿರಿ: ನಿಂತಿದ್ದ ಬೈಕ್ ಒಳಗಡೆ ನಾಗರ ಹಾವು ಸೇರಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ನಗರದ ಹೊರಭಾಗದ ಹೊಸಳ್ಳಿ ಕ್ರಾಸ್ ಬಳಿ ನಡೆದಿದೆ.
ನಗರದ ಗೃಹ ಮಂಡಳಿಯ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕಿನ ಸೀಟಿನ ಕೆಳಭಾಗದಲ್ಲಿ ನಾಗರಹಾವೊಂದು ಸೇರಿಕೊಂಡಿದೆ. ಸುಮಾರು 5 ಅಡಿ ಉದ್ದದ ನಾಗರಹಾವು ಸುಮಾರು 1 ಗಂಟೆಗಳ ಕಾಲ ಹೆಡೆ ಎತ್ತಿ ಬುಸುಗುಟ್ಟಿದೆ. ಬೈಕಿನಲ್ಲಿ ಹಾವನ್ನು ಕಂಡ ಸ್ಥಳೀಯರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು.
ಘಟನೆ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಚಾಂದ್ ಪಾಷಾರವರು ನಾಗರಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಹಾವುಗಳು ಬೆಚ್ಚನೆಯ ಜಾಗದಲ್ಲಿ ಅವಿತುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ ಹಿಂದೆಯೂ ರಾಜ್ಯದ ಹಲವು ಕಡೆ ಬೈಕಿನಲ್ಲಿ ಹಾವು ಪ್ರತ್ಯಕ್ಷಗೊಂಡಿತ್ತು.