ಗುವಾಹಟಿ: ಗಣರಾಜೋತ್ಸವ ದಿನದಂದೇ ಅಸ್ಸಾಂನಲ್ಲಿ 5 ಕಡೆ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ಸ್ಫೋಟದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ ಸಂಘಟನೆ ಸ್ಫೋಟ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಡಿಬ್ರುಗರ್‌ನಲ್ಲಿ 2 ಐಇಡಿ, ಸೋನಾರಿ, ದುಲಿಯಾಜನ್ ಮತ್ತು ದೂಮ್‍ಡೋಮದಲ್ಲಿ ತಲಾ ಒಂದು ಗ್ರೆನೇಡ್ ಸ್ಫೋಟಿಸಿದೆ ಎಂದು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Strongly condemn the bomb blasts in a few places of Assam. This cowardly attempt to create terror on a sacred day only exhibits the frustration of the terror groups after their total rejection by the people.
Our Govt will take the sternest action to bring the culprits to book.
— Sarbananda Sonowal (@sarbanandsonwal) January 26, 2020
Advertisement
ಒಂದು ಗಂಟೆಯ ಅವಧಿಯಲ್ಲಿ 5 ವಿವಿಧ ಪ್ರದೇಶಗಳಲ್ಲಿ ಸ್ಫೋಟ ನಡೆದಿದೆ. ಜನರು ಭಯೋತ್ಪಾದಕ ಗುಂಪುಗಳನ್ನು ತಿರಸ್ಕರಿಸಿದ ಪರಿಣಾಮ ಭಯೋತ್ಪಾದಕರು ನಿರಾಸೆಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸ್ಫೋಟಕ್ಕೆ ಕಾರಣರಾದವರನ್ನು ಪತ್ತೆ ಮಾಡಿ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಟ್ವೀಟ್ ಮಾಡಿದ್ದಾರೆ.
Advertisement
ಕೆಲ ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದಿದ್ದರು ಅವರೇ ಗ್ರೆನೇಡ್ ಇಟ್ಟು ಹೋಗಿದ್ದಾರೆ. ಸ್ಫೋಟದ ಸದ್ದು ಕೇಳಿದ ತಕ್ಷಣ ನಾವು ಸ್ಥಳಕ್ಕೆ ಹೋದೆವು ಎಂದು ಸ್ಥಳೀಯರು ತಿಳಿಸಿದ್ದಾರೆ.