ಬೆಂಗಳೂರು: ಬೇಸಿಗೆಯಲ್ಲಿ ಕೂದಲು ಬಿಟ್ಟುಕೊಂಡರೆ ಕಿರಿಕಿರಿಯಾಗುತ್ತದೆ. ಹೀಗಾಗಿ ಉರಿಬಿಸಿಲಿಗೆ ಹೊರಹೋಗುವಾಗ ಸಖತ್ ಗ್ಲಾಮರ್ ಆಗಿ ಕಾಣಲು ಹೊಸ ಹೊಸ ಹೇರ್ ಸ್ಟೈಲ್ ಗಳನ್ನ ನೀವು ಟ್ರೈ ಮಾಡಬಹುದು. ಹೀಗಾಗಿ ಯುವತಿಯರ ಕೂದಲ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲು ಇಲ್ಲಿ 5 ಟಿಪ್ಸ್ ನೀಡಲಾಗಿದೆ.
1. ಬ್ರೈಡೆಡ್ ಪೋನಿಟೇಲ್: ಈ ಲುಕ್ ನಿಮ್ಮ ಕಾಲೇಜ್, ಆಫೀಸ್ ಮತ್ತು ಶಾಪಿಂಗ್ ಗೆ ಹೋಗುವಾಗ ಟ್ರೈ ಮಾಡಬಹುದು. ಎರಡೂ ಕಡೆಯಿಂದ ಸಣ್ಣದಾದ ಜಡೆಯನ್ನ ಹೆಣೆದು ಒಂದು ಪೋನಿಟೇಲ್ ಹಾಕಿದರೆ ಸಾಕು. ತುಂಬಾ ಸೊಗಸಾಗಿ ಕಾಣುವ ಈ ಹೇರ್ ಸ್ಟೈಲ್ ಬೋಲ್ಡ್ ಮತ್ತು ಯಂಗ್ ಲುಕ್ ಕೊಡುತ್ತದೆ.
Advertisement
Advertisement
2. ಕ್ಲಾಸಿಕ್ ನೀಟ್ ಆಂಡ್ ಸ್ಟ್ರೈಟ್ ಪೋನಿಟೇಲ್: ಉದ್ದವಾದ ಕೂದಲಿರುವವರು ಈ ರೀತಿಯ ಪೋನಿಟೇಲ್ ಅನ್ನು ಬಳಸಿದರೆ ಎಷ್ಟು ಚೆಂದವಾಗಿ ಕಾಣಿಸುತ್ತಾರೆ. ಸ್ಟ್ರೈಟ್ ಹೇರ್‍ನವರು ಈ ಹೇರ್ ಸ್ಟೈಲ್ ಮಾಡಿದರೆ ಸಖತ್ ಹಾಟ್ ಆಗಿ ಕಾಣಿಸುತ್ತಾರೆ.
Advertisement
Advertisement
3. ಫಾಲಿಂಗ್ ಡೌನ್ ಅಪ್‍ಡು: ಈ ಲುಕ್ ಎಲ್ಲಾ ಪಾರ್ಟಿಗಳು, ಮದುವೆಯ ಸಮಾರಂಭಗಳು ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಟ್ರೆಡೀಶನಲ್ ಲುಕ್ ನೀಡುತ್ತದೆ.
4. ಟಾಸ್ಲೆಡ್ ಪಿಕ್ಸಿ ಹೇರ್ ಸ್ಟೈಲ್: ಕೂದಲು ಕಮ್ಮಿ ಇರುವ ಯುವತಿಯರು ಮತ್ತು ಹೇರ್ ಸ್ಟೈಲ್ ಮಾಡೋಕೆ ಸಮಯ ಇಲ್ಲ ಎಂದು ಗೊಣಗುವವರಿಗೆ ಈ ಹೇರ್ ಸ್ಟೈಲ್ ಸುಲಭ ಮತ್ತು ಅಂದವಾಗಿ ಕಾಣುವಲ್ಲಿ ಎರಡು ಮಾತಿಲ್ಲ.
5. ಶಾರ್ಟ್ ಬಾಬ್ ಕಟ್: ಚಿಕ್ಕ ಮಕ್ಕಳು ಸೇರಿದಂತೆ ಹದಿಹರೆಯದ ಯುವತಿಯರು, ಮಹಿಳೆಯರು ಮತ್ತು ವಯಸ್ಸಾದ ವೃದ್ಧೆಯರಿಗೂ ಈ ಹೇರ್ ಸ್ಟೈಲ್ ಎಂದೆಂದಿಗೂ ಅಚ್ಚು ಮೆಚ್ಚು. ಈ ಲುಕ್ ನಿಮ್ಮ ಬಾಲ್ಯದ ನೆನಪನ್ನು ಮರುಕಳಿಸುತ್ತದೆ.