ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದ ಕಾರು ಕಮರಿಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ತಿಸ್ಸಾ ತಹಸಿಲ್ನ ಸತ್ರುಂಡಿ ಬಳಿ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ ಕಾರು ಕಮರಿಗೆ ಬಿದ್ದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಅಪಘಾತದಿಂದ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಚಂಬಾಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್
ಮೃತರನ್ನು ರಾಕೇಶ್ ಕುಮಾರ್, ಅಮರ್ ಜೀತ್ ಸಿಂಗ್, ಮನೋಹರ್, ರಾಜೀವ್ ಶರ್ಮಾ(ಎಲ್ಲರೂ ಗುರುದಾಸ್ಪುರದವರು) ಮತ್ತು ಚಂಬಾ ಮೂಲದವನನ್ನು ಹೇಮ್ ಸಿಂಗ್ ಎಂದು ಗುರುತಿಸಲಾಗಿದೆ.