– 50 ಶತಕೋಟಿ ಡಾಲರ್ ಸಂಪತ್ತು ಬೆಂಕಿಗಾಹುತಿ, 1 ಲಕ್ಷ ಮಂದಿ ಸ್ಥಳಾಂತರ
ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದ (South California) ಆಕರ್ಷಕ ನಗರವಾದ ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು (Los Angeles Wildfires) ಹೊತ್ತಿಕೊಂಡಿದೆ. ಬೆಂಕಿ ನಿಯಂತ್ರಣಕ್ಕೆ ಬಾರದೇ ಕನಿಷ್ಠ 5 ಮಂದಿ ಸಜೀವ ದಹನವಾಗಿದ್ದಾರೆ.
Advertisement
ಸುಮಾರು 15,832 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, 1,000 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಕೆಲವೆಡೆ ಅಸಂಖ್ಯಾತ ಐಷಾರಾಮಿ ಮನೆಗಳು ಬೆಂಕಿ ಹೊತ್ತಿಕೊಳ್ಳುವ ಭೀತಿಯಲ್ಲಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: `ನಾಪತ್ತೆ’ಯಾಗಿದ್ದ ಅತುಲ್ ಸುಭಾಷ್ ಪುತ್ರ ಹರ್ಯಾಣ ಬೋರ್ಡಿಂಗ್ ಸ್ಕೂಲ್‌ನಲ್ಲಿ – ಖಚಿತಪಡಿಸಿದ ಫರಿದಾಬಾದ್ ಶಾಲೆ
Advertisement
Advertisement
ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಡ್ಡಿಂದ್ದ ಕಾಡ್ಗಿಚ್ಚು ಮಂಗಳವಾರದ ವೇಳೆಗೆ ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ. ಬುಧವಾರ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಕಾರ್ಯ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳಿತ್ತು. ಈ ವೇಳೆ ಚಂಡಮಾರುತ ಗಾಳಿ ಬೀಸಿದ್ದರಿಂದ ಬೆಂಕಿ ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್ ಗೇಟ್ ಓಪನ್ ಮಾಡಿದ್ದು ಯಾಕೆ?
Advertisement
50 ಶತಕೋಟಿ ಡಾಲರ್ ಸಂಪತ್ತು ನಷ್ಟ:
ಇನ್ನೂ ಲಾಸ್ ಏಂಜಲೀಸ್‌ನಲ್ಲಿ ಹಬ್ಬಿದ ಕಾಡ್ಗಿಚ್ಚಿನಿಂದ ಸುಮಾರು 50 ಶತಕೋಟಿ ಡಾಲರ್ (42,000 ಕೋಟಿ ರೂ.) ಸಂಪತ್ತು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!