ಕೊಪ್ಪಳ: ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ (G. Janardhana Reddy) ಇಂದು (ಡಿ.09) ಪಂಪಾ ಸರೋವರವದಲ್ಲಿ (Pampa Sarovara) ಹನುಮ ಮಾಲೆ ಧರಿಸಿದರು.
ಗಂಗಾವತಿ (Gangavathi) ತಾಲೂಕಿನ ಪಂಪಾಸರೋವರದಲ್ಲಿರುವ ಹನುಮ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮಾಲೆಯನ್ನು ಧರಿಸಿದರು. ಐದು ದಿನಗಳ ಕಾಲ ಹನುಮ ವ್ರತ ಆಚರಣೆ ಮಾಡಿ, ಬಳಿಕ ಡಿ.13 ರಂದು ಅಂಜನಾದ್ರಿಯಲ್ಲಿ
(Anjanadri) ಮಾಲೆ ವಿಸರ್ಜನೆ ಮಾಡಲಿದ್ದಾರೆ. ಪ್ರತಿ ವರ್ಷ ಮಾಲೆ ಧರಿಸುವ ಜನಾರ್ದನ ರೆಡ್ಡಿಯವರೊಂದಿಗೆ, ಅವರ ಬೆಂಬಲಿಗರು ಹನುಮ ಮಾಲೆ ಧರಿಸಿದರು.ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಅವಿರೋಧ ಆಯ್ಕೆ
Advertisement
Advertisement
ಮಾಲೆ ಧರಿಸಿ ಮಾತನಾಡಿದ ಅವರು, ಡಿ.12 ಹಾಗೂ 13 ರಂದು ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಸಕಲ ತಯಾರಿಯನ್ನು ಮಾಡಿಕೊಂಡಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಭಕ್ತರು ಹಾಗೂ ಮಾಲಾಧಾರಿಗಳು ಬರುವ ನಿರೀಕ್ಷೆಯಿದೆ. ಈ ಕಾರಣಕ್ಕೆ ಬೆಟ್ಟದ ಹಿಂಭಾಗ ಮಾಲಾಧಾರಿಗಳಿಗೆ, ಭಕ್ತರಿಗೆ ಡಿ.11 ರಿಂದ ಊಟ ಹಾಗೂ ಉಪಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
Advertisement
Advertisement
ರಾಜ್ಯದ ನಾನಾ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಭಕ್ತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್ ದೀಪಗಳಿಂದ ಬೆಳಕಿನ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಬೆಟ್ಟಕ್ಕೂ ಸಹ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುವುದು. ಅಷ್ಟೇ ಅಲ್ಲದೇ ರಾಜ್ಯದ ಬಿಜೆಪಿ ಪಕ್ಷದ ನಾಯಕರು ಸಹ ಮಾಲೆಯನ್ನು ಧರಿಸಿ, ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.
ದೇವರಲ್ಲಿ ಸಂಕಲ್ಪ:
ಸಾರ್ವಜನಿಕರಲ್ಲಿ ನಿಷ್ಠೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಹನುಮಂತನಲ್ಲಿ ಸಂಕಲ್ಪ ಮಾಡಿಕೊಂಡಿದ್ದೇನೆ. ಅದನ್ನು ಆ ದೇವರು ನನಗೆ ನೀಡಿದ್ದಾನೆ. ಇನ್ನೂ ಅಂಜನಾದ್ರಿಯನ್ನು ತಿರುಪತಿಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವ ಸಂಕಲ್ಪ ಇದೆ. ಅದನ್ನು ಸಹ ಆದಷ್ಟು ಬೇಗನೆ ಈಡೇರಿಸುವೆ. ಬೆಟ್ಟದ ಮೇಲಿರುವ ದೇವಸ್ಥಾನವನ್ನು ನಾನು ಹಾಗೂ ನನ್ನ ಸ್ನೇಹಿತರು ಜೊತೆಗೆ ಸೇರಿಕೊಂಡು ಜೀರ್ಣೋದ್ಧಾರ ಮಾಡಿ, ಬಂಗಾರದ ಗೋಪುರವನ್ನು ಸ್ಥಾಪನೆ ಮಾಡುತ್ತೇವೆ. 20 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಅದರ ಜೊತೆಗೆ ಬೆಟ್ಟದ ಹಿಂಭಾಗದಲ್ಲಿ ಕೂಡ 120 ಕೋಟಿ ರೂ. ವೆಚ್ಚದಲ್ಲಿ ಸುಮಾರು 3 ಕಿ.ಮೀ ವಿಸ್ತರಣೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದರು.ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್!