ಮುಂಬೈ: ಇಲ್ಲಿನ ಚರ್ಚ್ಗೇಟ್ ಬಳಿ 5 ದಿನದ ಹೆಣ್ಣು ಶಿಶುವನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದು, ಸೋಮವಾರ ಸಂಜೆ ಪ್ರಯಾಣಿಕರೊಬ್ಬರಿಂದಾಗಿ ಬೆಳಕಿಗೆ ಬಂದಿದೆ.
ಮುಂಬೈ ಸ್ಥಳೀಯ ರೈಲಿನಲ್ಲಿ ಪುಟ್ಟ ಕಂದಮ್ಮನನ್ನು ಬಿಟ್ಟು ಹೋಗಿದ್ದರು. ರೈಲಿನ ಅಂಗವಿಕಲ ಬೋಗಿಯಲ್ಲಿದ್ದ ಮಗುವನ್ನು ಕಂಡ ಪ್ರಯಾಣಿಕರೊಬ್ಬರು ಜಿಆರ್ ಪಿ (ಸರ್ಕಾರಿ ರೈಲ್ವೇ ಪೊಲೀಸರು) ಅಧಿಕಾರಿಗಳಿಗೆ ಕರೆ ಮಾಡಿ ಅಂಗವಿಕಲರ ಬೋಗಿಯಲ್ಲಿ ಯಾರೋ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ರೈಲ್ವೇ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬಿಳಿ ಬಟ್ಟೆಯಿಂದ ಸುತ್ತಿ ಮಗುವನ್ನು ಸೀಟ್ ನಲ್ಲಿ ಬಿಟ್ಟು ಹೋಗಿದ್ದರು. ಬಹಳ ದುರ್ಬಲ ಸ್ಥಿತಿಯಲ್ಲಿದ್ದ ಶಿಶುವನ್ನು ಜಿಆರ್ ಪಿ ಅಧಿಕಾರಿಗಳು ಮುಂಬೈ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಮಗುವಿನ ಹೆತ್ತವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಬೋಗಿಯಲ್ಲಿ ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂದು ಹುಡುಕುತ್ತಿದ್ದೇವೆ. ಜೊತೆಗೆ ಯಾರೆಲ್ಲ ಮಗುವಿನೊಂದಿಗೆ ರೈಲು ಹತ್ತಿದ್ದಾರೆ ಎಂದು ಕಂಡುಹಿಡಿಯಲು ಎಲ್ಲಾ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಸುತ್ತಿದ್ದೇವೆ ಎಂದು ಜಿಆರ್ ಪಿ ಅಧಿಕಾರಿ ಹೇಳಿದರು.