ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, ಪ್ರತಿದಾಳಿಯಲ್ಲಿ ಒಬ್ಬ ಉಗ್ರನನ್ನು ಸೈನಿಕರು ಹತ್ಯೆ ಮಾಡಿದ್ದಾರೆ.
ಅನಂತ್ ನಾಗ್ ಜಿಲ್ಲೆಯ ಕೆಪಿ ರೋಡ್ ಬಳಿ ಘಟನೆ ನಡೆದಿದ್ದು, ಸ್ಥಳೀಯ ಮಾಧ್ಯಮಗಳ ವರದಿಯ ಅನ್ವಯ ಇಬ್ಬರು ಉಗ್ರರು ಯೋಧರನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನ ನಡೆಸಿದ್ದರು. ಆಟೋಮ್ಯಾಟಿಕ್ ರೈಫಲ್ಸ್ ದಾಳಿ ನಡೆಸಿ, ಗ್ರೆನೇಡ್ ಗಳನ್ನು ಏಕಾಏಕಿ ಯೋಧರ ಮೇಲೆ ಎಸೆದಿದ್ದಾರೆ. ಈ ವೇಳೆ ಪ್ರತಿ ದಾಳಿಯಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.
Advertisement
#WATCH Jammu & Kashmir: Gunshots heard at the site of Anantnag terrorist attack in which 3 CRPF personnel have lost their lives & 2 have been injured, SHO Anantnag also critically injured. 1 terrorist has been neutralized in the operation. (Visuals deferred by unspecified time) pic.twitter.com/Uspen8iC4p
— ANI (@ANI) June 12, 2019
Advertisement
ಘಟನೆಯಲ್ಲಿ ಅನಂತ್ ನಾಗ್ ಪೊಲೀಸ್ ಠಾಣೆಯ ಅಧಿಕಾರಿ ಹರ್ಷದ್ ಅಹ್ಮದ್ ಗಾಯಗೊಂಡಿದ್ದು, ಅಲ್ಲದೇ ನಾಗರಿಕರೊಬ್ಬರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಯನ್ನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆ ಕೊಂಡ್ಯೊಯಲಾಗಿದೆ. ಪುಲ್ವಾಮಾ ದಾಳಿ ನಡೆದ ಬಳಿಕ ಉಗ್ರರು ಮತ್ತೆ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.
Advertisement
#UPDATE Total 5 CRPF personnel have lost their lives in Anantnag terrorist attack in Jammu & Kashmir, today. pic.twitter.com/sXoVnbkqzi
— ANI (@ANI) June 12, 2019