ಅತೀಕ್ ಅಹ್ಮದ್ ಪ್ರಕರಣ – ಐವರು ಪೊಲೀಸರ ಅಮಾನತು

Public TV
2 Min Read
Atiq Ahmed Ashraf

ಲಕ್ನೋ: ದರೋಡೆಕೋರ, ರಾಜಕಾರಣಿ ಅತೀಕ್ ಅಹ್ಮದ್ (Atiq Ahmad) ಮತ್ತು ಅವರ ಸಹೋದರ ಅಶ್ರಫ್ ಹತ್ಯೆಗೆ ಸಂಬಂಧಿಸಿದಂತೆ ಪ್ರಯಾಗರಾಜ್‌ನ (Prayagraj) ಐವರು ಪೊಲೀಸ್ ಅಧಿಕಾರಿಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಅಧಿಕಾರಿಗಳನ್ನು ಶಹಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಅತೀಕ್ ಅಹ್ಮದ್ ಮತ್ತು ಅವನ ಸಹೋದರನಿಗೆ ಗುಂಡು ಹಾರಿಸಿದ ಪ್ರಯಾಗ್ ರಾಜ್ ಮೆಡಿಕಲ್ ಕಾಲೇಜು ಈ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿದ್ದ ಕಾರಣಕ್ಕಾಗಿ ಐವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಮಾಡಬಾರದು – ಕೇಂದ್ರದ ಪರ ವಾದ 

POLICE JEEP 1

ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ (Ashraf) ಅವರನ್ನು ಪತ್ರಕರ್ತರ ಸೋಗಿನಲ್ಲಿ ಬಂದು ಏಪ್ರಿಲ್ 16ರಂದು ಪ್ರಯಾಗ್‌ರಾಜ್‌ನಲ್ಲಿ ಗುಂಡು ಹಾರಿಸಿದ್ದರು. ಅತೀಕ್ ಮತ್ತು ಆತನ ಸಹೋದರನನ್ನು ಸಂದರ್ಶಿಸಲು ಬಂದಿದ್ದ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದನ್ನೂ ಓದಿ: ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ

ಮೂವರು ಶೂಟರ್‌ಗಳಾದ ಹಮೀರ್‌ಪುರದ ಸನ್ನಿ ಸಿಂಗ್ (23), ಬಂಡಾದ ಲವಲೇಶ್ ತಿವಾರಿ (22) ಮತ್ತು ಕಾಸ್‌ಗಂಜ್‌ನ ಅರುಣ್ ಮೌರ್ಯ (18) ಅವರನ್ನು ಬಂಧಿಸಿ ಏಪ್ರಿಲ್ 23 ರವರೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ (Custody) ಕಳುಹಿಸಲಾಗಿದೆ. ಇದನ್ನೂ ಓದಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದಿದ್ದ ಅಧಿಕಾರಿಗಳ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ 

ATIQ AHMAD KILLERS

ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅತೀಕ್ ಅವರ ಪತ್ನಿ ಶೈಸ್ತಾ ಪರ್ವೀನ್ ಮತ್ತು ಉಮೇಶ್ ಪಾಲ್ ಹತ್ಯೆ ಪ್ರಕರಣದ ಇತರ ಆರೋಪಿ ಗುಡ್ಡು ಮುಸ್ಲಿಂ ಅವರನ್ನು ಬಂಧಿಸಲು ಸಭೆ ನಡೆಸಿದ ದಿನವೇ ಪೊಲೀಸರ ಅಮಾನತು ಮಾಡಿ ಶೂಟರ್‌ಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿದರು. ಇದನ್ನೂ ಓದಿ: ಅತಿಕ್ ಅಹ್ಮದ್ ಸಹಚರ ಗುಡ್ಡು ಮುಸ್ಲಿಂ ಲೊಕೇಶನ್ ಕರ್ನಾಟಕದಲ್ಲಿ ಪತ್ತೆ 

ಉಮೇಶ್ ಪಾಲ್ ಹತ್ಯೆಯ ಎಫ್‌ಐಆರ್‌ನಲ್ಲಿ ಹೆಸರಿಸಲಾದ 10 ಜನರಲ್ಲಿ ಗುಡ್ಡು ಮುಸ್ಲಿಂ ಒಬ್ಬರು. ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಪರಾರಿಯಾಗಿರುವ ನಾಲ್ವರಲ್ಲಿ ಗುಡ್ಡು ಮುಸ್ಲಿಂ ಕೂಡ ಒಬ್ಬ. ಶೈಸ್ತಾ ಪರ್ವೀನ್‌ಗೆ ಸಹಾಯ ಮಾಡಿದ ಶಂಕಿತ 20ಕ್ಕೂ ಹೆಚ್ಚು ಜನರನ್ನು ಪೊಲೀಸರು (Police) ಗುರುತಿಸಿದ್ದಾರೆ. ಗುಡ್ಡು ಮುಸ್ಲಿಂ ಅವರ ಲಾಸ್ಟ್ ಲೊಕೇಷನ್ (Location) ಕರ್ನಾಟಕವನ್ನು ತೋರಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ – ಇಸ್ಲಾಮಿಕ್ ಮತೀಯವಾದ ಬೆಳೆಸಿಕೊಂಡಿದ್ದ ಆರೋಪಿ 

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಎಸ್‌ಟಿಎಫ್ (STF) ಮುಖ್ಯಸ್ಥ ಅಮಿತಾಬ್ ಯಶ್, ಡಿಜಿ ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಕಾನ್ಫರೆನ್ಸ್‌ನಲ್ಲಿ ಶೈಸ್ತಾ ಮತ್ತು ಗುಡ್ಡು ಮುಸ್ಲಿಂ ಅವರನ್ನು ಬಂಧಿಸುವುದು ಹೇಗೆ ಎಂದು ಚರ್ಚಿಸಿದರು. ಇದನ್ನೂ ಓದಿ: ಇದು ಭಾರತವಲ್ಲ, ಪಂಜಾಬ್ – ಮುಖದಲ್ಲಿ ಧ್ವಜವಿದ್ದ ಯುವತಿಗೆ ಸ್ವರ್ಣ ಮಂದಿರ ಪ್ರವೇಶಕ್ಕೆ ನಿಷೇಧ

Share This Article