ಬೆಂಗಳೂರು: ಬಿಜೆಪಿಯಲ್ಲಿ (BJP) ಈಗ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ ರಚನೆಯಾಗುತ್ತಿದೆ. ಬಿಜೆಪಿ ಹೈಕಮಾಂಡ್‌ಗೆ ಇನ್ನೆರಡು ದಿನ 5 ಸಮುದಾಯಗಳೇ ಟಾರ್ಗೆಟ್ ಆಗಿದೆ. ಅಮಿತ್ ಶಾ (Amit Shah) ಬಂದು ಹೋದ ಬಳಿಕ ನಡ್ಡಾ ಕ್ಯಾಸ್ಟ್ ಕಾಂಬಿನೇಶನ್ ಸಾಕಷ್ಟು ಕುತೂಹಲ ಮೂಡಿಸಿದೆ.
ಇವತ್ತಿನಿಂದ ಎರಡು ದಿನ 6 ಪ್ರಮುಖ ಮಠಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಭೇಟಿ ನೀಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ಮಠಯಾತ್ರೆಗೆ ರೂಟ್ ಮ್ಯಾಪ್ ತಯಾರಿಸಿದ ರಾಜ್ಯ ಬಿಜೆಪಿ 5 ಸಮುದಾಯಗಳನ್ನು ಕೇಂದ್ರಿಕರಿಸಿದೆ.
ಪಕ್ಷದ ಸಂಘಟನಾ ಸಮಾವೇಶ, ಸಾರ್ವಜನಿಕ ಸಮಾವೇಶಗಳ ಜೊತೆ ಜೊತೆಯಲ್ಲೇ ಮಠಗಳ ಯಾತ್ರೆ ಕೈಗೊಳ್ಳುವ ನಡ್ಡಾ, ಪ್ರವಾಸದ ಮೊದಲ ದಿನವಾದ ಇಂದು ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಇವತ್ತೇ ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠ, ತರಳಬಾಳು ಮಠಗಳಿಗೆ ಭೇಟಿ ನೀಡಿ ಶ್ರೀಗಳ ಜೊತೆ ನಡ್ಡಾ ಮಾತುಕತೆ ನಡೆಸಲಿದ್ದಾರೆ. ಇನ್ನು ಜನವರಿ 6 ರಂದು ದಾವಣಗೆರೆ ಜಿಲ್ಲೆಯಲ್ಲಿ ಪಂಚಮಸಾಲಿ ಹರಿಹರ ಪೀಠಗೆ ಭೇಟಿ ಕೊಡುವ ಜೆ.ಪಿ.ನಡ್ಡಾ ಅವರು, ನಂತರ ಕನಕ ಗುರು ಪೀಠ, ವಾಲ್ಮೀಕಿ ಗುರು ಪೀಠಗಳಿಗೂ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ವಜ್ರ ಬಸ್ ಪ್ರಯಾಣಿಕರಿಗೆ ಶಾಕ್ – ದರ ಹೆಚ್ಚಳ
ಅಮಿತ್ ಶಾ ಬಂದು ಹೋದ ಬಳಿಕ ಬಿಜೆಪಿಯಲ್ಲಿ (BJP) ಬಲವಾದ ಜಾತಿ ಸಮೀಕರಣ ರಾಜಕಾರಣ ಶುರುವಾಗಿದೆ ಅಂದರೂ ತಪ್ಪಾಗಲಾರದು. ಹಳೇ ಮೈಸೂರು ಭಾಗದ ಭೇಟಿ ವೇಳೆ ಒಕ್ಕಲಿಗ, ಲಿಂಗಾಯತ ಕಾಂಬಿನೇಶ್ ಬಗ್ಗೆ ಶಾ ತಂತ್ರ ಮಾಡಿದರು. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಜೆಡಿಎಸ್ ವಿರುದ್ಧ ಗುಡುಗಿದ್ದ ಅಮಿತ್ ಶಾ ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟಿದ್ದರು. ಒಟ್ಟಾರೆ ಈ ಬಾರಿ ಕರ್ನಾಟಕದ ಚುನಾವಣೆಯಲ್ಲಿ ಜಾತಿ ಸಮೀಕರಣ, ಹಿಂದುತ್ವ ಅಜೆಂಡಾಗಳನ್ನ ಗಟ್ಟಿಗೊಳಿಸಲು ಬಿಜೆಪಿ ಹೈಕಮಾಂಡ್‌ನಿಂದ ಮೆಗಾ ಪ್ಲ್ಯಾನ್ ಮಾಡಿದ್ದು, ಸಕ್ಸಸ್ ರೇಟ್ ಎಷ್ಟಿರುತ್ತೆ ಕಾದು ನೋಡಬೇಕಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ: ಗೋವಿಂದ ಕಾರಜೋಳ ಘೋಷಣೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k