ಬೆಳಗಾವಿ: ಜಮೀನಿನಲ್ಲಿ ಕಟ್ಟಿದ್ದ ಗೋವುಗಳನ್ನ ರಾತ್ರೋರಾತ್ರಿ ದುರುಳರು ಕದ್ದು ಸಾಗಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.
ಜ.7ರ ರಾತ್ರಿ ಉಮಾ ಸಂಪಗಾವ ಎಂಬುವವರಿಗೆ ಸೇರಿದ್ದ ಐದು ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಜಮೀನಿನ ಶೆಡ್ ನಲ್ಲಿ ಕಟ್ಟಿದ್ದ ನಾಲ್ಕು ಜರ್ಸಿ ಆಕಳು, ಒಂದು ಆಕಳಿನ ಕರುವನ್ನು ಪಿಕಪ್ ವಾಹನದಲ್ಲಿ ಎತ್ತಿಕೊಂಡು ಹೋಗಿದ್ದಾರೆ.
Advertisement
Advertisement
ತಂದೆ ಇಲ್ಲದ, ಗಂಡನಿಲ್ಲದ ಉಮಾಗೆ ಆಕಳುಗಳು ಆಧಾರ ಸ್ತಂಭವಾಗಿದ್ದವು. ತಂದೆಯ ಆಸ್ತಿಯಲ್ಲಿ ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಉಮಾ ಅವರು ಈಗ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ವಕ್ಫ್ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್
Advertisement
ಜ.8 ರ ಮಧ್ಯರಾತ್ರಿ ಆಕಳುಗಳನ್ನು ಪಿಕಪ್ ವಾಹನದಲ್ಲಿ ಕದ್ದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಇಟ್ಟುಕೊಂಡು ಸವದತ್ತಿ ಪೊಲೀಸ್ ಠಾಣೆಯಲ್ಲಿ ಉಮಾ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿ ವಾರ ಕಳೆದರೂ ದನಗಳನ್ನ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.
Advertisement
ಸಿಸಿಟಿವಿ ದೃಶ್ಯವನ್ನು ನೀಡಿದಾಗ ಪಿಕ್‌ಅಪ್ ವಾಹನಕ್ಕೆ ನಂಬರ್ ಇಲ್ಲ ಎಂದು ಹೇಳಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ದನಗಳನ್ನು ಕಸಾಯಿಖಾನೆಗೆ ಸಾಗಿಸಿರಬಹುದು ಶಂಕೆ ವ್ಯಕ್ತಪಡಿಸುತ್ತಿರುವ ಉಮಾ ಈಗ ಕಂಡಕಂಡವರಲ್ಲಿ ಐದು ಆಕಳುಗಳನ್ನ ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.