ನಿಮ್ಮೊಳಗಿರುವ ಜೀವ ನಿಮಗೆ ಒತ್ತಡದ ನಡುವೆ ಅಪಾರ ಆನಂದ ನೀಡುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಎಲ್ಲಾ ಸಮಯದಲ್ಲಿ ತೊಡುವ ಉಡುಗೆಯನ್ನು ಧರಿಸಲು ಆಗುವುದಿಲ್ಲ. ತಮಗೆ ಸರಿಹೊಂದುವಂತಹ ನಿರ್ದಿಷ್ಟವಾದಂತಹ ಬಟ್ಟೆಗಳನ್ನು ಧರಿಸಬೇಕಾಗುತ್ತದೆ. ಅದರಲ್ಲಿಯೂ ಕೋವಿಡ್ ಸಮಯದಲ್ಲಿ ಗರ್ಭಿಣಿಯಾದ ಅನೇಕ ಮಹಿಳೆಯರು ಪಾರ್ಟಿ, ಸಮಾರಂಭಗಳಿಂದ ದೂರ ಸರಿದು ಮನೆಯಲ್ಲಿಯೇ ಉಳಿಯುವಂತೆ ಆಯಿತು. ಆದರೆ ನಿಮ್ಮ ಮನೆಯಲ್ಲಿಯೇ ಆಗಾಗ ಪಾರ್ಟಿಗಳನ್ನು ಆಯೋಜಿಸುತ್ತಿದ್ದರೆ, ನಿಮ್ಮ ಮೈಂಡ್ ಫ್ರೆಶ್ ಆಗಿರುತ್ತದೆ ಮತ್ತು ಈ ಪಾರ್ಟಿ ವೇಳೆ ನೀವು ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಕೆಲವೊಂದು ಡ್ರೆಸ್‍ಗಳ ಲಿಸ್ಟ್ ಈ ಕೆಳಗೆ ನೀಡಲಾಗಿದೆ. ತಾಯಿ ಮತ್ತು ಹೊಟ್ಟೆಯಲ್ಲಿರುವ ಮಗುವನ್ನು ಗಮನದಲ್ಲಿಟ್ಟುಕೊಂಡು ಈ ಹೆರಿಗೆ ಉಡುಪುಗಳನ್ನು ತಯಾರಿಸಲಾಗಿದೆ. ಅದು ಅಲ್ಲದೇ ಈ ಉಡುಪುಗಳು ನಿಮ್ಮ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ.
ರೇಯಾನ್ ಮಿಡಿ ಡ್ರೆಸ್
ಮೂರು ರೀತಿಯ ಬಣ್ಣಗಳಲ್ಲಿ ಈ ಡ್ರೆಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಈ ಮಿಡಿ ಧರಿಸಲು ಆರಾಮದಾಯಕವಾಗಿದೆ ಮತ್ತು ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಡ್ರೆಸ್ ಧರಿಸಿದಾಗ ನಿಮಗೆ ಒಂದು ರೀತಿ ಜೋಶ್ ಫಿಲ್ ನೀಡುವುದರ ಜೊತೆಗೆ ಕಲರ್‌ಫುಲ್ ಫಿಲ್ ನೀಡುತ್ತದೆ. ನೀವು ಹೆಚ್ಚಾಗಿ ಊಟ ಮಾಡಿದ ಸಂದರ್ಭದಲ್ಲಿ ಕೂಡ ಈ ಡ್ರೆಸ್ ಧರಿಸಿದ್ದರೆ, ಇದು ನಿಮಗೆ ಬಹಳ ಫ್ರಿ ಯಾಗಿರಿಸುತ್ತದೆ.
Advertisement
Advertisement
ರಿಲ್ಯಾಕ್ಸ್ಡ್ ಫಿಟ್ ಮ್ಯಾಕ್ಸಿ ಡ್ರೆಸ್
ಬಾಟಲ್ ಗ್ರಿನ್ ಕಲರ್ ಡ್ರೆಸ್ ಇದಾಗಿದ್ದು, ಇದು ನಿಮಗೆ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ. ಒಂದು ರೀತಿ ಇದು ಲಾಂಗ್ ಡ್ರೆಸ್ ಆಗಿದ್ದು, ಧರಿಸಲು ಸಖತ್ ಫ್ರಿ ಆಗಿದೆ ಮತ್ತು ಈ ಡ್ರೆಸ್‍ನಲ್ಲಿ ಯಾವುದೇ ಜಿಪ್‍ಗಳ ಕಿರಿಕಿರಿಯಿಲ್ಲ. ಇದನ್ನೂ ಓದಿ : ಯದುವೀರನಿಗಾಗಿ ಕನ್ನಡಕ್ಕೆ ವಾಪಸ್ಸಾದ ನೇಹಾ ಶೆಟ್ಟಿ
Advertisement
Advertisement
ಮೊಣಕಾಲುದ್ದದ ಹೆರಿಗೆ ಉಡುಗೆ
ಸಖತ್ ಕೂಲ್ ಹಾಗೂ ಟ್ರೆಂಡ್ ಆಗಿರುವ ಈ ಡ್ರೆಸ್ ಡೆನಿಮ್‍ನಿಂದ ವಿನ್ಯಾಸಗೊಳಿಸಲಾಗಿದ್ದು, ಇದು ನಿಮಗೆ ಮಾಡ್ರೆನ್ ಲುಕ್ ನೀಡುತ್ತದೆ. ಇದು ವೈಟ್ ಕ್ರೂ ನೆಕ್ ಟೀ ಶರ್ಟ್ ಮೇಲೆ ಧರಿಸಿರುವ ಡೆನಿಮ್ ಸಾಫ್ಟ್ ಉಡುಪಾಗಿದೆ.
ಲೇಸ್ ವರ್ಕ್ ಮಾಡಿರುವ ಹೆರಿಗೆ ಉಡುಗೆ
ವೈನ್-ಕೆಂಪು ಬಣ್ಣದ ಈ ಡ್ರೆಸ್ ಅದ್ಭುತವಾದಂತಹ ಸೆಲೆಕ್ಟಿವ್ ಡ್ರೆಸ್ ಆಗಿದೆ. ಲೇಸ್ ವರ್ಕ್ ಮಾಡಿರುವ ಈ ಡ್ರೆಸ್ ಹೆಚ್ಚಾಗಿ ಪಾರ್ಟಿಗಳಿಗೆ ಸೂಟ್ ಆಗುತ್ತದೆ. ಈ ಡ್ರೆಸ್‍ನಲ್ಲಿ ನಿಮ್ಮ ಬೇಬಿ ಬಂಪ್ ಎದ್ದು ಕಾಣಿಸುವುದರ ಜೊತೆಗೆ ನಿಮ್ಮನ್ನು ಸುಂದರವಾಗಿ ಕಾಣಿಸಲು ಸಹಾಯಕವಾಗಿದೆ ಮತ್ತು ಎಲ್ಲರ ಮುಂದೆ ನೀವು ಸಖತ್ ಆ್ಯಟ್ರಾಕ್ಟಿವ್ ಆಗಿ ಕಾಣಿಸುತ್ತೀರಾ. ಅದರಲ್ಲಿಯೂ ಈ ಡ್ರೆಸ್‍ಗೆ ನೀವು ಫ್ರೀ ಹೇರ್ಸ್ ಬಿಟ್ಟರೆ ಒಂದು ರೀತಿ ಕ್ವೀನ್‍ನಂತೆ ಕಾಣಿಸುತ್ತೀರಾ. ಇದನ್ನೂ ಓದಿ : ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್
ಕೋಟ್ ಜೊತೆಗೆ ಹೆರಿಗೆ ಉಡುಗೆ
ಹೆರಿಗೆ ಉಡುಗೆಯೊಂದಿಗೆ ನಿಮಗೆ ಇದರಲ್ಲಿ ಪುಟ್ಟ ಕೋಟ್ ನೀಡಲಾಗಿರುತ್ತದೆ. ಈ ಡ್ರೆಸ್ ನಿಮಗೆ ಆರಾಮದಾಯಕವಾಗಿ ಉಸಿರಾಡಲು ಸಹಾಯಕವಾಗಿದೆ. ಈ ಸ್ಟೈಲಿಶ್ ಡ್ರೆಸ್ ಪ್ರತಿಯೋರ್ವ ಮಹಿಳೆಯು ಗರ್ಭಿಣಿಯಾದಾಗ ಖರೀದಿಸಲೇಬೇಕಾದ ಡ್ರೆಸ್ ಆಗಿದ್ದು, ಗರ್ಭಿಣಿ ಸಮಯದಲ್ಲಿ ಮಾತ್ರವಲ್ಲದೇ ಹೆರಿಗೆಯ ನಂತರವೂ ನೀವು ಈ ಡ್ರೆಸ್ ಧರಿಸಬಹುದಾಗಿದೆ.