ಕಠ್ಮಂಡು: ನೆರೆಯ ದೇಶ ನೇಪಾಳದಲ್ಲಿ (Nepal) ಬುಧವಾರ ಮುಂಜಾನೆ 4.7 ಹಾಗೂ 5.3 ತೀವ್ರತೆಯ 2 ಬಾರಿ ಭೂಕಂಪನ (Earthquake) ಸಂಭವಿಸಿದೆ ಎಂದು ನೇಪಾಳದ ಭೂಕಂಪ ಮಾನಿಟರಿಂಗ್ ಹಾಗೂ ಸಂಶೋಧನಾ ಕೇಂದ್ರ (NEMRC) ತಿಳಿಸಿದೆ.
ನೇಪಾಳದ ಬಾಗ್ಲುಂಗ್ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ 01:23 ಹಾಗೂ 02:07 ರ ವೇಳೆಗೆ ಭೂಕಂಪ ಸಂಭವಿಸಿದೆ. ಇದೇ ವೇಳೆ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಎನ್‌ಇಎಂಆರ್‌ಸಿ, 01:23ಕ್ಕೆ ಬಾಗ್ಲುಂಗ್ ಜಿಲ್ಲೆಯ ಅಧಿಕಾರಿ ಚೌರ್ ಬಳಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. 02:07 ವೇಳೆಗೆ ಬಾಂಗ್ಲುಂಗ್ ಜಿಲ್ಲೆಯ ಖುಂಗಾ ಬಳಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
Advertisement
ಭೂಕಂಪದಿಂದಾಗಿ ಸದ್ಯ ಎಲ್ಲೂ ಸಾವು-ನೋವುಗಳು ಹಾಗೂ ಆಸ್ತಿ-ಪಾಸ್ತಿ ನಷ್ಟವಾಗಿರುವ ವರದಿಯಾಗಿಲ್ಲ. ಈ ಭೂಕಂಪಗಳಿಂದಾಗಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಜನರು ಮೊದಲಿಗಿಂತಲೂ ಹೆಚ್ಚು ಭಯಭೀತರಾಗಿದ್ದಾರೆ. ಏಕೆಂದರೆ ಡಿಸೆಂಬರ್ 24 ರಂದು ಇಲ್ಲಿ ನಡೆದ ಭೂಕಂಪದಿಂದಾಗಿ ನಗರದ ಅನೇಕ ಮನೆಗಳು ಬಿರುಕು ಬಿಟ್ಟು ಧರೆಗುರುಳಿದ್ದವು. ಜನರು ಘಟನೆಯಿಂದಾಗಿ ಬೀದಿಗಿಳಿದಿದ್ದರು. ಇದನ್ನೂ ಓದಿ: ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!