ಚಿಕ್ಕಬಳ್ಳಾಪುರ: 5 ವರ್ಷ ಪೂರ್ಣ ಪ್ರಮಾಣದ ಅಧಿಕಾರ ಕೊಡಿ, 5 ವರ್ಷದಲ್ಲಿ ಪಂಚರತ್ನ ಕಾರ್ಯಕ್ರಮ ಜಾರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ದೇವನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1 ವರ್ಷದಲ್ಲೇ 5,700 ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುತ್ತೇನೆ. 2ನೇ ವರ್ಷದಲ್ಲಿ ಗ್ರಾ.ಪಂ.ಕೇಂದ್ರದಲ್ಲಿ ಮಾದರಿ ಆರೋಗ್ಯ ಕೇಂದ್ರ ಆರಂಭ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎನ್ನುತ್ತಾರೆ. ಆದರೆ ಕರ್ನಾಟಕದಲ್ಲಿ ಏನು ನಡಿಯುತ್ತಿದೆ ಎಂಬುದು ಕಾಣುತ್ತಿಲ್ಲವೇ? ಮನ್ ಕೀ ಬಾತ್ ಎಂದು ಭಾಷಣ ಮಾಡಿ ಮೆಚ್ಚಿಸಲು ಮಾಡುತ್ತಾರೆ. ಇಂದು ಲಸಿಕೆ ಹಂಚಿಕೆ ಕಾರ್ಯಮಕ್ಕೆ ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ಕಳುಹಿಸಿದಂತೆ ಭಾಷಣ ಮಾಡುತ್ತಿದ್ದಾರೆ. ನರೇಂದ್ರ ಮೋದಿಯೇ ಕಳುಹಿಸಿದ್ದಾರೆ ಎನ್ನುವ ರೀತಿ ಪ್ರಚಾರ ಮಾಡಲಾಗುತ್ತಿದೆ ಎಂದರು.
ನರೇಂದ್ರ ಮೋದಿಯವರು ದೇಶಕ್ಕೆ ಏನೋ ಮಾಡುತ್ತಾರೆ ಅಂತಾರೆ. ಆದರೆ ಎರಡ್ಮೂರು ವರ್ಷ ಕಳೆದರೆ ಗೊತ್ತಾಗುತ್ತದೆ ಅವರು ಏನು ಮಾಡಿದ್ದಾರೆಂದು. ಹೀಗಾಗಿ ಅವರ ಬಗ್ಗೆ ಈಗ ಮಾತಾಡೋದು ಬೇಡ. ನನಗೆ ಪೂರ್ಣ ಪ್ರಮಾಣದ ಆಧಿಕಾರ ಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.