5 ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ – ಐಪಿಎಲ್ ಫ್ರಾಂಚೈಸಿಗಳ ಒತ್ತಾಯ

Public TV
2 Min Read
ipl 2020 trophy 1

ಮುಂಬೈ: ಐಪಿಎಲ್-2021ರಲ್ಲಿ ಆಡುವ 11ರ ಬಳಗದಲ್ಲಿ ಐದು ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ ಎಂದು ಫ್ರಾಂಚೈಸಿಗಳು ಬಿಸಿಸಿಐಗೆ ಒತ್ತಾಯ ಮಾಡುತ್ತಿವೆ ಎಂಬ ಮಾಹಿತಿ ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಬಿಸಿಸಿಐ ಮಾಡಿರುವ ಐಪಿಎಲ್ ನಿಯಮದ ಪ್ರಕಾರ, ಒಂದು ತಂಡದ ಆಡುವ 11ರ ಬಳಗದಲ್ಲಿ ನಾಲ್ಕು ಮಂದಿ ವಿದೇಶಿ ಆಟಗಾರರು ಮತ್ತು ಉಳಿದ ಏಳು ಮಂದಿ ಭಾರತೀಯ ಆಟಗಾರರು ಇರಬೇಕು. ಆದರೆ ಈ ನಿಯಮವನ್ನು ಬದಲಿಸಿ ಆಡುವ 11ರ ಬಳಗದಲ್ಲಿ ಐದು ವಿದೇಶಿ ಆಟಗಾರರನ್ನು ಆಡಿಸುವ ಅವಕಾಶ ನೀಡಬೇಕು ಎಂದು ಫ್ರಾಂಚೈಸಿಗಳು ಒತ್ತಾಯ ಮಾಡುತ್ತೀವೆ ಎನ್ನಲಾಗಿದೆ.

ipl rcb mi 3

ಕೊರೊನಾ ನಡುವೆಯೂ ಯುಎಇಯಲ್ಲಿ ಐಪಿಎಲ್ ಆಯೋಜನೆ ಮಾಡಿ ಗೆದ್ದು ಬೀಗಿರುವ ಬಿಸಿಸಿಐ, ಮುಂದಿನ ವರ್ಷದ ಐಪಿಎಲ್ ಮೇಲೆ ಕಣ್ಣಿಟ್ಟಿದೆ. ಐಪಿಎಲ್-2021ಗೆ ಇನ್ನೂ ಕೇವಲ ಐದು ತಿಂಗಳು ಬಾಕಿ ಇದ್ದು, ಒಂದು ಅಥವಾ ಎರಡು ಹೊಸ ಫ್ರಾಂಚೈಸಿಯನ್ನು ಪರಿಚಿಸುತ್ತಿದೆ. ಈಗ ಇದರ ಜೊತೆಯೇ ಈ ನಿಯಮವನ್ನು ಬದಲಾವಣೆ ಮಾಡಿ ಐದು ಜನ ವಿದೇಶಿ ಆಟಗಾರರು ಪ್ಲೇಯಿಂಗ್ ಇಲೆವೆನ್‍ನಲ್ಲಿ ಆಡಲು ಅನುಮತಿ ನೀಡಬೇಕು ಎಂದು ಫ್ರಾಂಚೈಸಿಗಳು ಮನವಿ ಮಾಡಿವೆ.

ipl 1

ಈ ವಿಚಾದ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಾವು ಗಂಭೀರವಾದ ಚರ್ಚೆ ಮಾಡಿಲ್ಲ. ಕೆಲ ಫ್ರಾಂಚೈಸಿಗಳು ಈ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದಿವೆ. ಇದರ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ತಂಡದಲ್ಲಿ ಕೋಟಿ ಕೋಟಿ ಪಡೆದ ವಿದೇಶಿ ಆಟಗಾರರನ್ನು ಬೇಂಚ್ ಕಾಯುತ್ತಿದ್ದಾರೆ. ಹೀಗಾಗಿ ನಿಯಮವನ್ನು ಬದಲಾವಣೆ ಮಾಡಿ ಎಂದು ಫ್ರಾಂಚೈಸಿಗಳು ಒತ್ತಾಯಿಸುತ್ತಿದ್ದರೆ, ಆಡುವ 11ರ ಬಳಗದಲ್ಲಿ ಐದು ವಿದೇಶಿ ಆಟಗಾರಿಗೆ ಅವಕಾಶ ನೀಡಿದರೆ, ಭಾರತದ ಸ್ಥಳೀಯ ಆಟಗಾರಿಗೆ ಅನ್ಯಾಯವಾಗುತ್ತದೆ ಎಂಬುದು ಕೆಲವರ ವಾದವಾಗಿದೆ.

ipl cup

ಈ ವರ್ಷ ಮಾರ್ಚ್‍ನಲ್ಲೇ ಆರಂಭವಾಗಬೇಕಿದ್ದ ಐಪಿಎಲ್-2020 ಆರು ತಿಂಗಳು ತಡವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಿತ್ತು. ಕೊರೊನಾ ನಡುವೆಯೂ ಯಾವುದೇ ಅಡತಡೆಗಳಿಲ್ಲದೇ ಐಪಿಎಲ್ ಭರ್ಜರಿಯಾಗಿ ಯಶಸ್ವಿಯಾಗಿತ್ತು. ನವೆಂಬರ್ 10ರಂದು ನಡೆದ ಫೈನಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ.

Share This Article
Leave a Comment

Leave a Reply

Your email address will not be published. Required fields are marked *