– ಪ್ರಯಾಣಿಕರ ಸಂಖ್ಯೆ ಬಹುತೇಕ ಇಳಿಕೆ
ಬೆಂಗಳೂರು: ಕೊರೊನಾದಿಂದ ಐದಾರು ತಿಂಗಳಿಂದ ಸ್ಥಗಿತವಾಗಿದ್ದ ನಮ್ಮ ಮೆಟ್ರೋ ಇಂದಿನಿಂದ ಸಂಚಾರ ಶುರುಮಾಡಿದೆ. ಆದರೆ ಬೈಯ್ಯಪ್ಪನಹಳ್ಳಿಯಿಂದ ಮೈಸೂರು ಮಾರ್ಗದ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ಓಡಲಿದೆ. ಇದರ ಜೊತೆಗೆ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.
ಕೋವಿಡ್ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಇಂದಿನಿಂದ ಹಂತ ಹಂತವಾಗಿ ಮೆಟ್ರೋ ಸಂಚಾರ ಆರಂಭವಾಗಿದೆ. ಮೊದಲು ಬೈಯಪ್ಪನಹಳ್ಳಿಯಿಂದ ಮೈಸೂರು ರೋಡ್‍ನ ನೇರಳ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ. ಈ ನೇರಳೆ ಮಾರ್ಗದಲ್ಲಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಓಡಲಿದೆ. 9ನೇ ತಾರೀಖಿನಿಂದ ಹಸಿರು ಮಾರ್ಗದ ಅಂದರೆ ಯಲಚೇನಹಳ್ಳಿಯಿಂದ ನಾಗಸಂದ್ರದ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
Advertisement
Advertisement
ಅಷ್ಟೇ ಅಲ್ಲದೇ ಬೆಳಗ್ಗೆ 3 ಗಂಟೆ, ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಓಡಾಡಲಿದೆ. ಬೆಳಗ್ಗೆ 8 ಗಂಟೆಯಿಂದ 11, ಸಂಜೆ 4.30 ರಿಂದ ರಾತ್ರಿ 7.30 ವರೆಗೆ ಮೆಟ್ರೋ ಸಂಚಾರ ಮಾಡಲಿದೆ. ಸೆಪ್ಟೆಂಬರ್ 11 ರಿಂದ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ. ಮೆಟ್ರೋ ಶುರುವಾಯಿತು ಎಂದು ಎಲ್ಲರೂ ಒಮ್ಮೆ ನುಗ್ಗುವಂತ್ತಿಲ್ಲ. ಯಾಕಂದರೆ ಕೊರೊನಾ ರೂಲ್ಸ್‌ಗಳನ್ನು ಕಟ್ಟುನಿಟ್ಟಿನಿಂದ ಫಾಲೋ ಮಾಡಲೇಬೇಕು.
Advertisement
Advertisement
ಮೆಟ್ರೋ ಸಂಚಾರಕ್ಕೆ ರೂಲ್ಸ್
* ಆರೋಗ್ಯ ಸೇತು ಆಪ್ ಇದ್ದರೆ ಮಾತ್ರ ಎಂಟ್ರಿ
* ಕ್ಯಾಶ್‍ಲೆಸ್ ಸಂಚಾರಕ್ಕೆ ಮಾತ್ರ ಅವಕಾಶ
* ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಮಾತ್ರ ಮೆಟ್ರೋಗೆ ಎಂಟ್ರಿ
* ಟೋಕನ್ ಬಳಸಿ ಸಂಚಾರಕ್ಕೆ ಅವಕಾಶ ಇಲ್ಲ
* ಸ್ಯಾನಿಟೈಸರ್ ಬಳಕೆ, ಉಷ್ಣಾಂಶ ಚೆಕ್ ಆದ್ರೆ ಮಾತ್ರ ಎಂಟ್ರಿ
* ಸ್ಟೇಷನ್‍ನಲ್ಲಿ ಪ್ರಯಾಣಿಕರ ನಿಲುಗಡೆಗೆ ಬಾಕ್ಸ್
* ಪ್ರವೇಶ ದ್ವಾರ, ನಿರ್ಗಮನ, ಪ್ಲಾಟ್ ಫಾರ್ಮ್‌ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
* ಎಸ್ಕೇಲೇಟರ್ ಬಳಸುವ ಪ್ರಯಾಣಿಕರು ಒಂದು ಮೆಟ್ಟಿಲು ಅಂತರ ಕಾಪಾಡಬೇಕು
* ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
* 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
* 6 ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
* ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಬೇಕು
* ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಲ್ಲಿಸಲ್ಲ
* 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ
ಈಗಾಗಲೇ ಮೊದಲ ಮೆಟ್ರೋ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರನ್ನು ಮೆಟ್ರೋ ಸ್ಟೇಷನ್ ಒಳಗೆ ಸಿಬ್ಬಂದಿ ಕಳುಹಿಸುತ್ತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಬೈಯಪ್ಪನಹಳ್ಳಿ ಟು ನಾಯಂಡಹಳ್ಳಿಗೆ ಮೊದಲ ಮೆಟ್ರೋ ಹೊರಟಿದೆ. ಆದರೆ ಪ್ರಯಾಣಿಕರ ಸಂಖ್ಯೆ ಬಹುತೇಕ ಇಳಿಕೆಯಾಗಿದೆ. ಮೊದಲ ಟ್ರೈನ್‍ನಲ್ಲಿ ಬೆರಳೆಕೆಯಷ್ಟು ಜನರು ಮಾತ್ರ ಪ್ರಯಾಣ ಮಾಡುತ್ತಿದ್ದಾರೆ.