ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಐದು ವರ್ಷದಲ್ಲಿ ಬರೋಬ್ಬರಿ 70 ಕೋಟಿ ರೂ. ಹಣ ಸಂಪಾದನೆ ಮಾಡಿದ್ದರು ಎಂದು ಖಾಸಗಿ ಪತ್ರಿಕೆ ವರದಿ ಮಾಡಿದೆ.
ಸುಶಾಂತ್ ವೈದ್ಯಕೀಯ ವರದಿ ನೀಡಿದ ಡಾ.ಸುಧೀರ್ ಗುಪ್ತಾ ಇದೊಂದು ಆತ್ಮಹತ್ಯೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಇತ್ತ ಸುಶಾಂತ್ ಬ್ಯಾಂಕ್ ವ್ಯವಹಾರವನ್ನು ಸಿಬಿಐ ಆಡಿಟ್ ಮಾಡಿಸಿತ್ತು. ಆಡಿಟ್ ವರದಿ ಸಹ ಸಿಬಿಐ ಕೈ ಸೇರಿದ್ದು, ಸುಶಾಂತ್ ಸ್ಪಾ, ಪ್ರವಾಸ ಮತ್ತು ಗಿಫ್ಟ್ ಖರೀದಿಗಾಗಿ ಹೆಚ್ಚು ಹಣ ವ್ಯಯ ಮಾಡಿದ್ದರು ಅನ್ನೋ ವಿಷಯ ರಿವೀಲ್ ಆಗಿದೆ. ಐದು ವರ್ಷಗಳಲ್ಲಿ ಸುಶಾಂತ್ ಗೆಳತಿ ರಿಯಾಗಾಗಿ 55 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ
Advertisement
Advertisement
ವೈದ್ಯಕೀಯ ವರದಿಯಲ್ಲಿಯೂ ಸಿಬಿಐಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಇತ್ತ ಸುಶಾಂತ್ ಆರ್ಥಿಕ ವ್ಯವಹಾರಗಳು ಪಾರದರ್ಶಕವಾಗಿರೋದು ಬೆಳಕಿಗೆ ಬಂದಿದೆ. ಎಲ್ಲ ವ್ಯವಹಾರಗಳು ಸುಶಾಂತ್ ನಿರ್ದೇಶನದಲ್ಲಿ ನಡೆದಿರೋದು ಮೇಲ್ನೋಟಕ್ಕೆ ಕಂಡು ಬಂದಿವೆ. ಬ್ಯಾಂಕ್ ವ್ಯವಹಾರದ ಕೆಲ ಮಾಹಿತಿಯನ್ನ ಮಾತ್ರ ಪತ್ರಿಕೆ ಪ್ರಕಟಿಸಿದೆ. ಸುಶಾಂತ್ ನಿಧನದ ಒಂದೂವರೆ ತಿಂಗಳ ಬಳಿಕ ತಂದೆ ಕೆ.ಕೆ.ಸಿಂಗ್, ಮಗನ ಖಾತೆಯಿಂದ 17 ಕೋಟಿ ವ್ಯವಹಾರವಾಗಿದೆ. ಆ ಹಣ ಯಾರಿಗೆ ಮತ್ತು ಏಕೆ ವರ್ಗಾವಣೆ ಆಯ್ತು ಎಂದು ಪ್ರಶ್ನಿಸಿ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ
Advertisement
Advertisement
ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಜಾರಿ ನಿರ್ದೇಶನಾಲಯ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ. ಪ್ರಕರಣ ಸಂಬಂಧ ನಟಿ ರಿಯಾ ಚಕ್ರವರ್ತಿಯನ್ನು ಮೂರು ದಿನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆದ್ರೆ ಇದುವರೆಗೂ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ ಏನಾಯ್ತಿ ಎಂಬುದರ ಮಾಹಿತಿಯನ್ನ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ಅಕ್ಕ ರಿಯಾಗೆ ಜಾಮೀನು ಸಿಕ್ಕರೂ ಶೌವಿಕ್ ಬೇಲ್ ರಿಜೆಕ್ಟ್
ಸುಶಾಂತ್ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ನಟನ ಕುಟುಂಬ, ಸಹೋದ್ಯೋಗಿಗಳು, ಸಹಾಯಕರು, ಆಪ್ತರು ಸೇರಿದಂತೆ ಸುಮಾರು 24ಕ್ಕೂ ಹೆಚ್ಚು ಜನರನ್ನ ವಿಚಾರಣೆಗೆ ಒಳಪಡಿಸಿದೆ. ಇಷ್ಟು ಮಾತ್ರವಲ್ಲದೇ ಸುಶಾಂತ್ ಉಳಿದುಕೊಳ್ಳುತ್ತಿದ್ದ ಹೋಟೆಲ್, ರೆಸಾರ್ಟ್ ಸಿಬ್ಬಂದಿಯಿಂದಲೂ ಮಾಹಿತಿ ಕಲೆ ಹಾಕಿದೆ. ಇದನ್ನೂ ಓದಿ: ರಿಯಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸೂಕ್ತ ಆಧಾರಗಳಿಲ್ಲ- ಮುಂಬೈ ಕೋರ್ಟ್
2019 ಆಕ್ಟೋಬರ್ 14ರಂದು ಸುಶಾಂತ್ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಲ್ಲಿ 4.64 ಕೋಟಿ ರೂ. ಹಣವಿತ್ತು. ಕೇವಲ 90 ದಿನಗಳಲ್ಲಿ 1.4 ಕೋಟಿ ಬಂದು ನಿಂತಿತ್ತು. ಈ 90 ದಿನಗಳಲ್ಲಿ ಹೆಚ್ಚು ಹಣ ರಿಯಾ ಮತ್ತು ಆಕೆಯ ಪರಿವಾರಕ್ಕಾಗಿ ಖರ್ಚು ಮಾಡಲಾಗಿದೆ. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು
* 14 ಅಕ್ಟೋಬರ್ 2019ರಂದು ರಿಯಾ ಸೋದರ ಶೌವಿಕ್ ಖಾತೆಗೆ 81,901 ರೂ. ವರ್ಗಾವಣೆಯಾಗಿದೆ.
* 15 ಅಕ್ಟೋಬರ್ 2019ರಂದು ದೆಹಲಿಯ ತಾಜ್ ಹೋಟೆಲ್ ವಾಸ್ತವ್ಯಕ್ಕಾಗಿ 4.3 ಲಕ್ಷ ರೂ. ಪಾವತಿ
* 16 ಅಕ್ಟೋಬರ್ 2019ರಂದು ರಿಯಾ ಮತ್ತು ಶೌವಿಕ್ ವಿಮಾನ ಟಿಕೆಟ್ ಬುಕ್ಕಿಂಗ್ ಗಾಗಿ 76 ಸಾವಿರ ಕಳುಹಿಸಲಾಗಿದೆ. ಇದಾದ ಕೆಲ ದಿನಗಳ ನಂತರ ಹಲವು ಬಾರಿ ಹಣ ವರ್ಗಾವಣೆಯಾಗಿದೆ.
* 14 ನವೆಂಬರ್ 2019ಕ್ಕೆ ರಿಯಾ ಹೆಸರಲ್ಲಿ ಒಂದೂವರೆ ಲಕ್ಷದ ವ್ಯವಹಾರ ನಡೆದಿದೆ.
* 20 ಮತ್ತು 21 ನವೆಂಬರ್ 2019ರಂದು ರಿಯಾ ಮೇಕಪ್ ಮತ್ತು ಶಾಪಿಂಗ್ ಗಾಗಿ 75 ಸಾವಿರ ರೂ.
* 24 ನವೆಂಬರ್ 2019 ರಿಯಾ ಶಾಪಿಂಗ್ ಗಾಗಿ 22,220 ರೂ.
* 25 ನವೆಂಬರ್ 2019ರ ಇದೇ ಖಾತೆಯಿಂದ ಶೌವಿಕ್ ಟ್ಯೂಷನ್ ಫೀ ಪಾವತಿ. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ