ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಬೆಳಗಾವಿಯ ಸರ್ಕಾರಿ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತಾಡಿದ ಶಾಸಕಿ ಹೆಬ್ಬಾಳ್ಕರ್, ಐದು ಲಕ್ಷ ಹಣ ಮಂಜೂರು ಮಾಡಲು ಸಹ ನನಗೆ ಕಷ್ಟ ಕೊಡುತ್ತಿದ್ದಾರೆ. ತಮಗೆಲ್ಲರಿಗೂ ಗೊತ್ತು ನನಗೆ ಯಾರು ಕಷ್ಟ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
Advertisement
Advertisement
ಚೆನ್ನಾಗಿ ಕೆಲಸ ಮಾಡಿದ್ರೆ ಒಳ್ಳೆಯ ಹೆಸರು ಬರುತ್ತೆ ಅಂತ ಬಹಳ ಪ್ರಾಬ್ಲಂ ಮಾಡ್ತಿದ್ದಾರೆ. ಆದರೆ ನಾನು ಯಾವುದಕ್ಕೂ ಜಗ್ಗುತ್ತಿಲ್ಲ. ನೀವು ನನ್ನ ಫೇಸ್ಬುಕ್ನಲ್ಲಿ ನೋಡ್ತಿರಬಹುದು ದಿನ ಒಂದು ಕೋಟಿ ರೂ. ಕೆಲಸ ಮಾಡ್ತಿದ್ದೀನಿ. ಅವರು ನನ್ನ ಎಷ್ಟು ತಡೀಬೇಕು ಅಂತಿದ್ದಾರಲ್ಲ ಅಷ್ಟು ಜಾಸ್ತಿ ನನ್ನ ಕೆಲಸ ಮಾಡ್ತಿದ್ದೀನಿ. ಅವರದ್ದೇ ಸರ್ಕಾರ, ಅವರದ್ದೇ ಮಂತ್ರಿಗಳು ಇದ್ದಾರೆ. ಅದೇ ಅಧಿಕಾರಿಗಳಿಗೆ ಕನ್ವಿಯನ್ಸ್ ಮಾಡಿ ಕ್ಷೇತ್ರದ ಕೆಲಸ ಮಾಡಿಸುತ್ತಿದ್ದೇನೆ ಎಂದರು.
Advertisement
Advertisement
ನಾನು ಶಾಸಕಿಯಾದಾಗಿನಿಂದ ಬಂದಿಲ್ಲ ಒಂದು ಕಷ್ಟ ಬರುತ್ತಿವೆ. ಪ್ರವಾಹ ಆಯ್ತು, ಕೊರೊನಾ ಆಯ್ತು, ಸರ್ಕಾರದೊಳಗೆ ಅನೇಕ ಏರುಪೇರಾಯ್ತು. ಕಾಂಗ್ರೆಸ್ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬಂತು. ಹೆಣ್ಣು ಮಗಳಿಗೆ ಏನೇನೂ ಕಷ್ಟ ಬರಬೇಕು ಅದೆಲ್ಲಾ ಒಮ್ಮೆಗೆ ಬಂತು. ನಾನು ಶಾಸಕಿ ಆದ ಮೇಲೆ ಎಲ್ಲಾ ಸರಿಹೋಗುತ್ತೆ ಅಂದುಕೊಂಡಿದ್ದೆ. ಎಂಎಲ್ಎ ಆದ್ಮೇಲೆ ಜಾಸ್ತಿ ಸಂಘರ್ಷ ಶುರುವಾಯ್ತು. ಆದರೂ ಇಡೀ ಕ್ಷೇತ್ರ ಸುಧಾರಣೆ ಮಾಡಬೇಕೆಂದು ಪಣ ತೊಟ್ಟಿದ್ದೀನಿ. ಪ್ರತಿಯೊಂದು ಹಂತದಲ್ಲೂ ಸಂಘರ್ಷ ಎದುರಾಗುತ್ತಿದೆ ಎಂದು ಅಳಲು ತೋಡಿಕೊಂಡರು.