ಟಾಸ್ ಸೋತ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿತ್ತು. ಗೆಲುವಿಗೆ 216 ರನ್ ಗುರಿ ಪಡೆದ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು.
ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಶಿವಂ ದುಬೆ ಬ್ಯಾಟಿಂಗ್ ಬಲ ತುಂಬಿದ್ದರು. ಭರ್ಜರಿ ಸಿಕ್ಸರ್ ಮಳೆ ಸುರಿಸುತ್ತಾ 15 ಎಸೆತಗಳಲ್ಲೇ ಸ್ಫೋಟಕ ಫಿಫ್ಟಿ ಬಾರಿಸಿದ್ದರು. ಒಂದಂತದಲ್ಲಿ ದುಬೆ ಕ್ರೀಸ್‌ನಲ್ಲಿ ಇದ್ದಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆಯಿತ್ತು. ಆದ್ರೆ 15ನೇ ಓವರ್‌ನ ಕೊನೇ ಎಸೆತದಲ್ಲಿ ಹರ್ಷಿತ್ ರಾಣಾ ಸ್ಟ್ರೈಕ್ ಮಾಡಿದರು. ಈ ವೇಳೆ ಚೆಂಡು ಬೌಲರ್ ಮ್ಯಾಟ್ ಹೆನ್ರಿ ಅವರ ಕೈಗೆ ತಾಕಿ ವಿಕೆಟ್‌ಗೆ ಬಡಿಯಿತು. ಈ ರನೌಟ್‌ನಿಂದ ಮತ್ತೆ ಗೆಲುವು ಕಿವೀಸ್‌ನತ್ತ ವಾಲಿತು.
ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡದ ಶಿವಂ ದುಬೆ 23 ಎಸೆತಗಳಲ್ಲಿ 65ರನ್ ಗಳಿಸಿದರು. ರಿಂಕು ಸಿಂಗ್ 30 ಎಸೆತಗಳಲ್ಲಿ 39ರನ್, ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ 24 ರನ್, ರವಿ ಬಿಷ್ಣೋಯ್ 10 ಎಸೆತಗಳಲ್ಲಿ 10 ರನ್ ಗಳಿಸಿದರು. ಕೊನೆಗೆ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ಮಾಡಿದ್ದ ಮಿಚೆಲ್ ಸ್ಯಾಂಟ್ನರ್ 3 ವಿಕೆಟ್, ಇಶ್ ಸೋದಿ ಹಾಗೂ ಜಾಕೋಬ್ ತಲಾ 2 ವಿಕೆಟ್, ಮ್ಯಾಟ್ ಹೆನ್ರಿ, ಝಾಕ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್‌ನ ಟಿಮ್ ಸೀಫರ್ಟ್ 36 ಎಸೆತಗಳಲ್ಲಿ 62 ರನ್ ಹಾಗೂ ಡೆವೊನ್ ಕಾನ್ವೇ 23 ಎಸೆತಗಳಲ್ಲಿ 44 ರನ್ ಗಳಿಸಿ ಭರ್ಜರಿ 100 ರನ್‌ಗಳ ಜೊತೆಯಾಟವಾಡಿದರು. ಡ್ಯಾರಿಲ್ ಮಿಚೆಲ್ 18 ಎಸೆತಗಳಲ್ಲಿ 39, ಗ್ಲೆನ್ ಫಿಲಿಪ್ಸ್ 16 ಎಸೆತಗಳಲ್ಲಿ 24 ರನ್ ಕೊಟ್ಟರು. ಮಿಚೆಲ್ ಸ್ಯಾಂಟ್ನರ್ 6 ಎಸೆತಗಳಲ್ಲಿ 11 ಹಾಗೂ ಝಾಕ್ ಫೌಲ್ಕ್ಸ್ 13 ರನ್ ಗಳಿಸಿದರು.
ಭಾರತದ ಪರ ಆರ್ಶ್ದೀಪ್ ಸಿಂಗ್, ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ, ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದುಕೊಂಡರು.

