ಅಬುಧಾಬಿ (ಯುಎಇ): SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಘದ ಜಂಟಿ ಆಶ್ರಯದಲ್ಲಿ ಕಳೆದ ಜೂನ್ 28ರಂದು ಹಮ್ಮಿಕೊಂಡಿದ್ದ 4ನೇ ಸಾರ್ವಜನಿಕ ರಕ್ತದಾನ ಶಿಬಿರವು (Blood Camp) ಅಬುಧಾಬಿ ಖಾಲಿದಿಯ್ಯಾದಲ್ಲಿರುವ ಸೇಹಾ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಜರುಗಿತು.
ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕರ್ತ ಮಜೀದ್ ಬೊಳ್ವಾರು ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಒಟ್ಟು 86 ಮಂದಿ ರಕ್ತದಾನ ಮಾಡಿದ್ದು, ಈ ಪೈಕಿ ಮೂವರು ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ದಾನ ಮಾಡಿದ್ದಾರೆ. ರಕ್ತದಾನ ಪ್ರಕ್ರಿಯೆಯಲ್ಲಿ ಸೇಹಾ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದರು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಬಿರದ ಮುಖ್ಯ ಸಂಯೋಜಕ ಮುನೀರ್ ಬೆಳ್ಳಾರೆ ಅವರು ಮಾತನಾಡಿ, ಇದು ಅಬುಧಾಬಿಯಲ್ಲಿ ನಮ್ಮ ಸಂಘಟನೆ ನಡೆಸಿದ 4ನೇ ಯಶಸ್ವಿ ಶಿಬಿರ. ಮುಂದೆಯೂ ಇಂತಹ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಸುರಕ್ಷಿತವಾಗಿದೆ, ಹಠಾತ್ ಸಾವಿಗೆ ಸಂಬಂಧವಿಲ್ಲ: ಸೀರಮ್ ಇನ್‌ಸ್ಟಿಟ್ಯೂಟ್
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಉಸ್ತಾದ್ ಶಹೀರ್ ಹುದವಿ ಅವರು ರಕ್ತದಾನದ ಇಸ್ಲಾಮಿಕ್ ಮಹತ್ವವನ್ನು ವಿವರಿಸಿದರು. ಒಬ್ಬ ಮನುಷ್ಯ ತನ್ನ ಸಹೋದರನ ನೆರವಿಗೆ ನಿಲ್ಲುವುದಾದರೆ, ಅಲ್ಲಾಹ್ ತನ್ನ ನೆರವಿನಲ್ಲಿ ಅವನ ಜೊತೆಗಿರುತ್ತಾನೆ ಎಂಬ ಹದೀಸ್ ಉಲ್ಲೇಖಿಸಿ, ರಕ್ತದಾನವೆಂದರೆ ಕೇವಲ ಮಾನವೀಯತೆ ಅಲ್ಲ, ಇದು ಇಮಾನ್‌ನ ಭಾಗವಾಗಿದೆ ಎಂದು ತಿಳಿಸಿದರು.
SKSSF ಅಬುಧಾಬಿ ಕರ್ನಾಟಕದ ಅಧ್ಯಕ್ಷ ಹನೀಫ್ ಹರಿಯಮೂಲೆ ಅವರು ಸಂಘಟನೆ ನಿರಂತರವಾಗಿ ಸಮಾಜದ ಒಳಿತಿಗಾಗಿ ತೊಡಗಿಕೊಂಡಿದ್ದು, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ಸಹಯೋಗದೊಂದಿಗೆ ಈ ಶಿಬಿರ ಯಶಸ್ವಿಯಾಗಿ ನಡೆದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನ | ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ಬೆಂಗಳೂರು – ಮುರುಡೇಶ್ವರ ರೈಲು ಸ್ಥಗಿತ
ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಖ್ಯಾತ ಸಾಹಿತಿ ಅನ್ಸಾರ್ ಕಾಟಿಪಳ್ಳ ಅವರು, ನಾವೆಲ್ಲರೂ ಅನಿವಾಸಿಗಳಾದರೂ ಸಮಾಜದ ಒಳಿತಿಗಾಗಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿ, ಸ್ವತಃ ತಮ್ಮದೇ ಬರವಣಿಗೆಯಲ್ಲಿ ರಕ್ತದಾನದ ಬಗ್ಗೆ ಕವನವನ್ನು ವಾಚಿಸಿ ಕಾರ್ಯಕ್ರಮಕ್ಕೆ ಸಾಹಿತ್ಯದ ನೋಟವನ್ನು ಜೋಡಿಸಿದರು.
ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ವ್ಯವಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ ಮತ್ತು ಕಾರ್ಯ ನಿರ್ವಾಹಕ ಶಾಫಿ ಮಾಣಿ ಹಾಗೂ ಇಕ್ಬಾಲ್ ಕನಕಮಜಲು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಯಾನ್ ರಿಯಲ್ ಎಸ್ಟೇಟ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅನ್ಸಾರ್ ಬೆಳ್ಳಾರೆ ಹಾಗೂ ಕೆಎಂಸಿಸಿ ಪ್ರಮುಖರಾದ ಅಝೀಝ್ ಪರ್ಮುದೆ, ಕಾಸರಗೋಡು SKSSF ಪ್ರಮುಖರಾದ ನೌಫಲ್ ಪಟ್ಟಾಂಬಿ, ಕೆ.ಎಚ್ ಅಲಿ ಮಾಸ್ತಿಕುಂಡು, ಕಮಾಲ್ ಮಲ್ಲಮ್, ಅಶ್ರಫ್ ಮೀನಾಪೀಸ್, ಫೈಝಲ್ ಸೀತಾಂಗೋಳಿ, ಬಾದುಷಾ ಕಾಞಂಗಾಡ್, ಹನೀಫಾ ಎರಿಯಾಲ್, ಪಿಕೆ ಅಶ್ರಫ್ ಮುಂತಾದ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಶುಭಾಶಯಗಳೊಂದಿಗೆ ಪ್ರೋತ್ಸಾಹ ನೀಡಿದರು.
ಶಿಬಿರದಲ್ಲಿ SKSSF ಅಬುಧಾಬಿ ಕರ್ನಾಟಕದ ಪ್ರಮುಖರಾದ ಉಸ್ತಾದ್ ಹಾರಿಸ್ ಮಕ್ದೂಮಿ ಕುಕ್ಕಾಜೆ, ಅಬೂಬಕ್ಕರ್ ಸಕಲೇಶಪುರ, ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿ ಜಾಫರ್ ಉಪ್ಪಿನಂಗಡಿ, ಶಿಬಿರದ ಉಸ್ತುವಾರಿ ಹಾಗೂ ಕೆಐಸಿ ಕುಂಬ್ರ ಅಬುಧಾಬಿ ಘಟಕದ ಪ್ರಧಾನ ಕಾರ್ಯದರ್ಶಿ ಹಂಝ ನಾಳ, SKSSF ಕಾರ್ಯಕರ್ತರಾದ ತ್ವಾಹ ಉಪ್ಪಿನಂಗಡಿ, ಅಬೂಬಕ್ಕರ್ ಮುಂಡೋಳೆ,ಅನಸ್ ಕರಾಯ, ಅನ್ಸಾರ್ ಅಲ್ ಐನ್, ಯಾಸೀರ್ ಬೋಳಿಯಾರ್,ಶಾಫಿ ಕಿನ್ಯಾ, ಸಫ್ವಾನ್ ಕೊಡಾಜೆ, ಸ್ವಾದಿಕ್ ಬೆಳ್ಳಾರೆ, ಉಮ್ಮರ್ ಪಾಂಡವರಕಲ್ಲು,ಬಶೀರ್ ಕಾವು, ಬಿಡಬ್ಲ್ಯೂ ಎಫ್ ಅಬುದಾಬಿ ಪ್ರತಿನಿಧಿಗಳಾದ ನವಾಝ್ ಉಚ್ಚಿಲ, ಮುಜೀಬ್ ಉಚ್ಚಿಲ ಹಾಗೂ ಇನ್ನೂ ಅನೇಕರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.
ಕಾರ್ಯಕ್ರಮವನ್ನು SKSSF ಅಬುಧಾಬಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಝೈನ್ ಸಖಾಫಿ ನಿರೂಪಣೆ ಮಾಡಿದರೆ, ಬಶೀರ್ ಕೊಡ್ಲಿಪೇಟೆ ಧನ್ಯವಾದ ಸಲ್ಲಿಸಿದರು. ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿರುವ SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ.) ಇದರ ಜಂಟಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.