ಹುಬ್ಬಳ್ಳಿ: ದೆಹಲಿಯಲ್ಲಿ (New Delhi) ಇತ್ತೀಚೆಗೆ ಆಯೋಜಿಸಿದ್ದ 4ನೇ ರಾಷ್ಟ್ರಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್‌ಶಿಪ್ (Para Shoorting Championship) 2023ರಲ್ಲಿ ಹುಬ್ಬಳ್ಳಿಯ (Hubballi) ಮೂವರು ಶೂಟರ್ಸ್‌ಗಳು 2 ಚಿನ್ನ ಹಾಗೂ 2 ಕಂಚಿನ ಪದಕ ಪಡೆದು ರಾಜ್ಯದ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಡಾಕ್ಟರ್ ಕರುಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಕರ್ನಾಟಕದಿಂದ ಒಟ್ಟು ಎಂಟು ಜನ ಪ್ಯಾರಾ ಶೂಟರ್ಸ್‌ಗಳು ಭಾಗವಹಿಸಿದ್ದರು. ಪದಕ ವಿಜೇತ ಮೂವರೂ ಹುಬ್ಬಳ್ಳಿಯ ಆಟಗಾರರು ಎಂಬುದು ವಿಶೇಷ. ಶ್ರೀಹರ್ಷ ದೇವರೆಡ್ಡಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ರಾಂಡಿಂಗ್ ಮಿಕ್ಸೆಡ್ ಎಸ್‌ಎಚ್-2ನಲ್ಲಿ ಚಿನ್ನದ ಪದಕ, 10 ಮೀಟರ್ ಏರ್ ರೈಫಲ್ ಪ್ರೋನ್ ಮಿಕ್ಸೆಡ್‌ನಲ್ಲಿ 1 ಚಿನ್ನದ ಪದಕ, 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ರಾಕೇಶ ನಿಡಗುಂದಿ ಅವರಿಗೆ ವೈಯಕ್ತಿಕ ವಿಭಾಗದಲ್ಲಿ 1 ಕಂಚಿನ ಪದಕ, 50 ಮೀಟರ್ ರೈಫಲ್ ಪ್ರೋನ್ ತಂಡದ ವಿಭಾಗದಲ್ಲಿ ಶಂಕರಲಿಂಗ ತವಳಿ ಹಾಗೂ ರಾಕೇಶ ನಿಡಗುಂದಿ ಅವರು 1 ಕಂಚಿನ ಪದಕ ಪಡೆದಿದ್ದಾರೆ. ಇದನ್ನೂ ಓದಿ: ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು
Advertisement
Advertisement
ವಿಜೇತರಿಗೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜೆಪಿ ನೋಟಿಯಲ್, ಕರ್ನಲ್ ಅಮರಜೀತಸಿಂಗ್ ಪದಕ ವಿತರಿಸಿದರು. ರವಿಚಂದ್ರ ಬಾಲೇಹೊಸೂರ ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. ಇದನ್ನೂ ಓದಿ: ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ
Advertisement