ಅಬುಧಾಬಿ: ಇಲ್ಲಿ ನಡೆದ ಐರ್ಲೆಂಡ್ (Ireland) ಹಾಗೂ ಅಫ್ಘಾನಿಸ್ತಾನ (Afghanistan) ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್ ಮೊದಲ ಜಯಗಳಿಸಿದೆ. ಈ ಮೂಲಕ ಸತತ ಏಳು ಸರಣಿ ಸೋಲುಗಳಿಗೆ ಐರ್ಲೆಂಡ್ ತಂಡ ಅಂತ್ಯ ಹಾಡಿದೆ.
ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್‍ಗಳಿಂದ ಮಣಿಸಿದ ಐರ್ಲೆಂಡ್‌ಗೆ ಇದು ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ. ಇದಕ್ಕೂ ಮೊದಲು ತಂಡವು 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎಲ್ಲದರಲ್ಲೂ ಸೋಲನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಗೆಲುವಿಗೆ 111 ರನ್‍ಗಳ ಗುರಿ ಪಡೆದ ಐಲೆರ್ಂಡ್, ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಅವರ ಅಜೇಯ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು ಜಯ ಗಳಿಸಿತು.
Advertisement
ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಒಂದು ಹಂತದಲ್ಲಿ 13ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ನಾಯಕ ಆಂಡ್ರ್ಯೂ ಬಲ್ಬಿರ್ನಿ, ಮೊದಲು ಪಾಲ್ ಸ್ಟಿಲಿರ್ಂಗ್ ಅವರೊಂದಿಗೆ ನಾಲ್ಕನೇ ವಿಕೆಟ್‍ಗೆ 26 ರನ್‍ಗಳ ಜೊತೆಯಾಟವನ್ನು ಆಡಿದರು. ನಂತರ ಲೋರ್ಕನ್ ಟಕರ್ ಅವರೊಂದಿಗೆ ಐದನೇ ವಿಕೆಟ್‍ಗೆ 72 ರನ್‍ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನಡೆಸಿದರು. ಈ ಇನ್ನಿಂಗ್ಸ್‌ನಲ್ಲಿ ಐರಿಶ್ ನಾಯಕ 96 ಎಸೆತಗಳಲ್ಲಿ ಅಜೇಯ 58 ರನ್ ಕಲೆಹಾಕಿದರು. ಐಲೆರ್ಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಭಾಗವಾಗಿಲ್ಲದ ಕಾರಣ ಹೆಚ್ಚಿನ ಸಂದರ್ಭಗಳಲ್ಲಿ ಕೇವಲ 1 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತದೆ. ಇದುವರೆಗೆ ತಂಡವು ಶ್ರೀಲಂಕಾ ವಿರುದ್ಧ ಒಮ್ಮೆ ಮಾತ್ರ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದೆ.
Advertisement
Advertisement
ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 155 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‍ನಲ್ಲಿ 218 ರನ್ ಗಳಿಸಿತ್ತು. ಇತ್ತ ಐಲೆರ್ಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್ ಕಲೆಹಾಕಿ 108 ರನ್‍ಗಳ ಮುನ್ನಡೆ ಗಳಿಸಿತ್ತು.
Advertisement
ಆಸ್ಟ್ರೇಲಿಯಾ ತನ್ನ ಮೊದಲ ಟೆಸ್ಟ್ ಗೆಲ್ಲಲು ಒಂದು ಪಂದ್ಯವನ್ನು ತೆಗೆದುಕೊಂಡಿತ್ತು. ಇಂಗ್ಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಮ್ಮ ಮೊದಲ ಟೆಸ್ಟ್ ಗೆಲ್ಲಲು ಎರಡು ಪಂದ್ಯಗಳನ್ನು ತೆಗೆದುಕೊಂಡಿತ್ತು. ವೆಸ್ಟ್ ಇಂಡೀಸ್ ಆರು ಪಂದ್ಯಗಳನ್ನು ಆಡಿದ್ದರೆ ಐಲೆರ್ಂಡ್ ಈಗ ಎಂಟು ಪಂದ್ಯಗಳನ್ನು ತೆಗೆದುಕೊಂಡಿದೆ. 25 ಪಂದ್ಯಗಳ ನಂತರ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯ ಗೆದ್ದಿತ್ತು.