ನವದೆಹಲಿ: ಅಮೆರಿಕದಿಂದ (America) ಗಡಿಪಾರು ಮಾಡಲಾದ ಭಾರತೀಯ ಅಕ್ರಮ ವಲಸಿಗರ (Indian Migrants) ನಾಲ್ಕನೇ ಬ್ಯಾಚ್ ಇಂದು ದೆಹಲಿಗೆ (Delhi) ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಮಿಲಿಟರಿ ವಿಮಾನದಲ್ಲಿ ಪನಾಮ ಮೂಲಕ 12 ಭಾರತೀಯರು ತಾಯ್ನಾಡಿಗೆ ಬಂದಿಳಿದಿದ್ದಾರೆ. 12 ಜನರಲ್ಲಿ ನಾಲ್ವರು ಪಂಜಾಬ್‌ನ ಅಮೃತಸರಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಲೆಕ್ಕಪತ್ರ ನೀಡದ್ದಕ್ಕೆ ಬಿಷಪ್‍ಗೆ ಘೇರಾವ್ – ಚರ್ಚ್‍ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ!
ಮೊದಲ ಹಂತದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಭಾರತೀಯರನ್ನು ಅಮೆರಿಕ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ವಾಪಾಸ್ ಕರೆತರಲಾಗಿತ್ತು. 2ನೇ ಹಂತದ ಗಡಿಪಾರಿನಲ್ಲಿ 119 ಮಂದಿ ಹಾಗೂ 3ನೇ ಹಂತದಲ್ಲಿ 112 ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕ ಸರ್ಕಾರ ಗಡಿಪಾರು ಮಾಡಿತ್ತು. ಇದನ್ನೂ ಓದಿ: ಪಾಕಿಸ್ತಾನ ಆಲೌಟ್ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್