ಮೈಸೂರು: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಡೆದಿದ್ದು, ಕಳ್ಳನ ಕೈಚಳಕ ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 27ರಂದು ಘಟನೆ ನಡೆದಿದ್ದು, ಜುಲೈ 3ರಂದು ಲೆಕ್ಕಹಾಕುತ್ತಿದ್ದಾಗ 50 ಸಾವಿರ ಮೌಲ್ಯದ 16.3 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಎಲ್ಲ ಸಿಸಿಟಿವಿ ಕ್ಯಾಮೆರಾ ವಿಡಿಯೋ ನೋಡಿದಾಗ ಕಳ್ಳನ ಕೈಚಳಕ ಬಯಲಾಗಿದೆ.
Advertisement
ನಡೆದಿದ್ದು ಏನು?
ಊಟದ ಸಮಯದಲ್ಲಿ ವ್ಯಕ್ತಿಯೊಬ್ಬನು ಗ್ರಾಹಕನಂತೆ ಚಿನ್ನದ ಅಂಗಡಿಗೆ ಬಂದಿದ್ದನು. ಸಿಬ್ಬಂದಿ ಊಟಕ್ಕೆ ಹೋಗಿದ್ದರು, ಹೀಗಾಗಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಪಕ್ಕದಲ್ಲಿಯೇ ಗ್ರಾಹಕರಿದ್ದರೂ, ಅವರಿಗೆ ಗೊತ್ತಾಗದಂತೆ ತನ್ನ ಎದುರಿಗಿದ್ದ ಬಾಕ್ಸ್‍ನಿಂದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅನುಮಾನ ಬಾರದಂತೆ ಮತ್ತೆ ಖಾಲಿಯಾಗಿದ್ದ ಜಾಗವನ್ನು ಸರಿಪಡಿಸಿದ್ದಾನೆ. ಮಳಿಗೆಯಲ್ಲಿ 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಕಳ್ಳ ಅದನ್ನು ಗಮನಿಸದೇ ಈ ಕೃತ್ಯ ಎಸಗಿದ್ದಾನೆ.
Advertisement
ಕಳ್ಳತನ ಮಾಡಿರುವ ವ್ಯಕ್ತಿ ವೃತ್ತಿಪರ ಕಳ್ಳನೆಂದು ಶಂಕೆ ವ್ಯಕ್ತವಾಗಿದೆ. ಮಳಿಗೆಯ ಸಹಾಯಕ ಮ್ಯಾನೆಜರ್ ಇರ್ಷದ್ ಅವರು ನಗರದ ಲಷ್ಕರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
Advertisement
https://youtu.be/3mm43iHUUwA