ಬೆಂಗಳೂರು: ಸ್ಟೀಲ್ ಬ್ರಿಡ್ಜ್ ಮಾದರಿಯಲ್ಲೇ ದುಡ್ಡು ಹೊಡೆಯೋಕೆ ಮತ್ತೊಂದು ಯೋಜನೆ ತಯಾರಾದಂತೆ ಕಾಣಿಸ್ತಿದೆ. ಅದೂ ಅಲ್ಲದೇ ಮೇಲ್ಸೇತುವೆ ನಿರ್ಮಾಣಕ್ಕಾಗಿ ಮರಗಳ ಮಾರಣ ಹೋಮ ನಡೆಸುತ್ತಿದೆ.
589 ಮೀಟರ್ ಮೇಲ್ಸೇತುವೆ ನಿರ್ಮಾಣಕ್ಕಾಗಿ 49 ಮರಗಳನ್ನ ಕಡಿಯೋದಕ್ಕೆ ಅನುಮತಿ ನೀಡಲಾಗಿದೆ. ಬೆಂಗಳೂರಿನ ಯಲಹಂಕ ಡೈರಿಯಿಂದ 589 ಮೀಟರ್ ಫ್ಲೈ ಓವರ್ ನಿರ್ಮಾಣ ಮಾಡಲಾಗ್ತಿದೆ. 2016-17ನೇ ಸಾಲಿನ ಮುಖ್ಯಮಂತ್ರಿಗಳ ನಗರೋತ್ಥಾನ ಅಡಿಯಲ್ಲಿ ನಿರ್ಮಾಣವಾಗ್ತಿರುವ ಕಾಮಗಾರಿಗೆ 34 ಕೋಟಿ ಖರ್ಚು ಮಾಡಲಾಗ್ತಿದೆ.
Advertisement
Advertisement
ಈ ಮೇಲ್ಸೇತುವೆ ಯಾವುದೇ ಸಿಗ್ನಲ್‍ನಿಂದ ಮತ್ತೊಂದು ಸಿಗ್ನಲ್‍ಗೆ ಸಂಪರ್ಕ ಕಲ್ಪಿಸುವುದಿಲ್ಲ. ರಸ್ತೆಯ ಉಬ್ಬು ಹತ್ತಿ ಇಳಿದ ಹಾಗೆ ಈ ಫ್ಲೈವರ್ ನಿರ್ಮಾಣ ಮಾಡಲು ಪ್ಲಾನ್ ರೂಪಿಸಲಾಗಿದೆ. ಪಿಜೆಬಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಟೆಂಡರ್ ಪಡೆದಿದ್ದು, ಕಳೆದ ಎರಡು ವಾರದಿಂದ ರಾತ್ರೋ ರಾತ್ರಿ ಮರ ಕಡಿಯೋ ಕಾರ್ಯಾಚರಣೆ ನಡೀತಿದೆ.
Advertisement
ಈಗಾಗಲೇ 30ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಹಾಕಲಾಗಿದೆ. ಸ್ಟೀಲ್ ಬ್ರಿಡ್ಜ್‍ಗೆ ನಿರ್ಮಾಣ ವಿಚಾರ ಬಂದಾಗ ಪರಿಸರವಾದಿಗಳು ರಸ್ತೆಗಿಳಿದಿದ್ರು, ಅಪ್ಪಿಕೊ ಚಳವಳಿ ಮಾಡಿ ಪ್ರತಿಭಟಿಸಿದ್ದ ಹೋರಾಟಗಾರರು ಈಗ ಎಲ್ಲಿ ಹೋದ್ರೋ ಗೊತ್ತಿಲ್ಲ. ಈ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.