ನ್ಯೂಜಿಲೆಂಡ್ ಶೂಟೌಟ್‍ಗೆ 49 ಮಂದಿ ಬಲಿ: 15 ನಿಮಿಷಗಳ ಕಾಲ ದಾಳಿ ಲೈವ್ ಮಾಡಿದ್ದ ಉಗ್ರ

Public TV
2 Min Read
NZ ATTACK

– ವಿಡಿಯೋ ಗೇಮ್‍ನಂತೆ ಗುಂಡಿನ ದಾಳಿ
– ಸುರಕ್ಷಿತವಾಗಿ ಪಾರಾದ ಬಾಂಗ್ಲಾ ಕ್ರಿಕೆಟ್ ತಂಡ

ವೆಲ್ಲಿಂಗ್ಟನ್: ಮೊಬೈಲ್ ವಿಡಿಯೋ ಗೇಮ್ ಗಳಲ್ಲಿ ಗನ್ ಮೂಲಕ ವೈರಿಗಳನ್ನು ಹೀರೋ ಶೂಟ್ ಮಾಡುವಂತೆ ಉಗ್ರನೊಬ್ಬ ಮಸೀದಿಗೆ ನುಗ್ಗಿ ನ್ಯೂಜಿಲೆಂಡಿನ ಕ್ರಿಸ್ಟ್ ಚರ್ಚ್‍ನಲ್ಲಿ ಅಮಾಯಕರನ್ನು ಹತ್ಯೆ ಮಾಡಿದ್ದಾನೆ.

ಹೌದು. ಸೈನಿಕರ ಉಡುಪು ಧರಿಸಿದ್ದ ಉಗ್ರ ಮಸೀದಿ ಪ್ರವೇಶಿಸಿ ಮನಸಿಗೆ ಬಂದಂತೆ ದಾಳಿ ಮಾಡಿದ್ದಾನೆ. ಈ ವೇಳೆ ಕೆಲವರು ದಾಳಿ ನೋಡಿ ಓಡಿ ಹೋಗಿ ರೂಮಿನ ಒಳಗೆ ಹೋಗಿದ್ದಾರೆ. ಇದನ್ನು ತಿಳಿದು ಉಗ್ರ ಕೊಠಡಿ ನುಗ್ಗಿ ಗುಂಡಿನ ಮಳೆಯನ್ನು ಸುರಿಸಿದ್ದಾನೆ. ನಡೆಯುತ್ತಿದ್ದಾಗ ಬಿದ್ದ ಮೃತ ದೇಹಗಳ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ.

Capture 10

ನ್ಯೂಜಿಲೆಂಡ್ ಕ್ರಿಸ್ಟ್ ಚರ್ಚ್ ನಲ್ಲಿ ನಡೆದ ಗುಂಡಿನ ದಾಳಿಯನ್ನು ಭಯೋತ್ಪಾದಕರ ಕೃತ್ಯ ಎಂದು ನ್ಯೂಜಿಲೆಂಡ್ ಸರ್ಕಾರ ಅಧಿಕೃತವಾಗಿ ಹೇಳಿದ್ದು, ಘಟನೆಯಲ್ಲಿ 49 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಘಟನೆ ಸಂಬಂಧಿಸಿದಂತೆ 4 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯೂಜಿಲೆಂಡ್ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ ಟ್ವೀಟ್ ಮಾಡಿದ್ದಾರೆ. ದಾಳಿ ಮಾಡಿದ ವ್ಯಕ್ತಿ ಆಸ್ಟ್ರೇಲಿಯಾ ಪೌರತ್ವವನ್ನು ಹೊಂದಿದ್ದು, ಬಲಪಂಥೀಯ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಅನ್ವಯ, ಉಗ್ರ ತಾನು ಮಾಡಿದ್ದ ದಾಳಿಯನ್ನು ಫೇಸ್‍ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದ್ದ. ಅಲ್ಲದೇ ಮಿಲಿಟರಿ ಶೈಲಿಯಲ್ಲಿ ಉಡುಗೆ ತೊಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಗಳು ಖಚಿತ ಪಡಿಸಿದ್ದು, ಆಧುನಿಕ ತಂತ್ರಜ್ಞಾನದ ರೈಫಲ್ ನೊಂದಿಗೆ ದಾಳಿ ನಡೆಸಿದ್ದ ಎಂದು ತಿಳಿಸಿದ್ದಾರೆ.

ಇತ್ತ ಬಾಂಗ್ಲಾದೇಶ ಕ್ರಿಕೆಟ್ ತಂಡ ಘಟನೆಯಲ್ಲಿ ಸುರಕ್ಷಿತವಾಗಿ ಪಾರಾಗಿದ್ದು, ಫೈರಿಂಗ್ ಆರಂಭವಾದ ಕೂಡಲೇ ಚರ್ಚ್ ಪಾರ್ಕ್ ಬಳಿಯಿಂದ ಓಡಿ ಬಂದಿದ್ದರು ಎಂದು ಬಾಂಗ್ಲಾ ಪತ್ರಕರ್ತರೊಬ್ಬರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮಾರ್ಚ್ 15 ರಿಂದ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ನಡುವೆ ಆರಂಭವಾಗಬೇಕಿದ್ದ ಅಂತಿಮ ಹಾಗೂ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ರದ್ದು ಪಡಿಸಲಾಗಿದೆ.

ಉಗ್ರ ನಡೆಸಿರುವ ದಾಳಿಯ ವಿಡಿಯೋವನ್ನು ಅಂತರ್ಜಾಲದಿಂದ ತೆಗೆದು ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ನ್ಯೂಜಿಲೆಂಡ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಅಂತಹ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಪಾಕಿಸ್ತಾನದಲ್ಲಿ ಉಗ್ರರು ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಸಾಗುತ್ತಿದ್ದ ಬಸ್ ಮೇಲೆ ಫೈರಿಂಗ್ ನಡೆಸಿದ್ದರು. ಈ ಘಟನೆಯಲ್ಲಿ ಪೊಲೀಸು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. 6 ಮಂದಿ ಶ್ರೀಲಂಕಾ ಕ್ರಿಕೆಟ್ ಆಟಗಾರರು ಗಾಯಗೊಂಡಿದ್ದರು. ಆ ಬಳಿಕ 2002 ರಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧದ ಟೂರ್ನಿಯನ್ನ ರದ್ದುಪಡಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *