ಬೆಂಗಳೂರು: ಇಂದು ಕರ್ನಾಟಕದಲ್ಲಿ 487 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 493 ಜನ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಇಂದು ರಾಜ್ಯದಲ್ಲಿ ಒಟ್ಟು 16,697 ಮಂದಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ 1758 (ಶೇ.11)ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
Advertisement
Advertisement
ಇಂದು ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,42,518ಕ್ಕೆ ಏರಿಕೆ ಆಗಿದೆ. ಈ ಪೈಕಿ 9,24,304 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,959 ಸಕ್ರಿಯ ಪ್ರಕರಣಗಳಿವೆ.
Advertisement
ಒಟ್ಟು ಇಲ್ಲಿಯವರೆಗೆ 12,236 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 141 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3,671 ಆಂಟಿಜನ್ ಟೆಸ್ಟ್, 70,556 ಆರ್ಟಿ ಪಿಸಿಆರ್ ಸೇರಿದಂತೆ ಒಟ್ಟು 74,230 ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 250 ಮಂದಿಗೆ ಸೋಂಕು ಬಂದಿದೆ. ದಕ್ಷಿಣ ಕನ್ನಡ 30, ಮೈಸೂರು 28, ತುಮಕೂರು 23, ಚಿತ್ರದುರ್ಗ 16, ಬೀದರ್ ನ 18 ಮಂದಿಗೆ ಸೋಂಕು ಬಂದಿದೆ. ಒಟ್ಟು 141 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 72 ಕಲಬುರಗಿ 10, ಮೈಸೂರು 5, ಉಡುಪಿ 4, ಮತ್ತು ದಕ್ಷಿಣ ಕನ್ನಡದಲ್ಲಿ 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.