ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಸಾಥ್ ಕೊಡಲು ಸಾವಿರ ಸಾವಿರ ಕಾವಲುಗಾರರಿದ್ದಾರೆ. ಬೈ ಎಲೆಕ್ಷನ್ ಬೂತ್ ಕಾಯಲು ಬರೋಬ್ಬರಿ 42,185 ಮಂದಿ ಇದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬಿಜೆಪಿ, ಆರ್ ಎಸ್ ಎಸ್ ಒಳಗೊಂಡ ಕಾರ್ಯಕರ್ತರ ಪಡೆ ಅಖಾಡಕ್ಕಿಳಿಯಲು ಸಜ್ಜಾಗುತ್ತಿವೆ. ನವೆಂಬರ್ 25ರಿಂದ ಡಿಸೆಂಬರ್ 5ರ ತನಕ ಕಾವಲು ಕಾಯುವ ಕೆಲಸ ಮಾಡುತ್ತವೆ. ಬೂತ್ ಗೊಬ್ಬ ಕಾವಲುಗಾರ, ಬೂತ್ ಸ್ಥಿತಿಗತಿ ಬಗ್ಗೆ ಮಾಹಿತಿ ರವಾನಿಸುವುದು, ಎದುರಾಳಿ ತಂತ್ರಗಾರಿಕೆ ತಿಳಿದುಕೊಳ್ಳುವುದೇ ಇವರ ಕೆಲಸವಾಗಿದೆ.
ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಒಟ್ಟು 4185 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೊಬ್ಬ ಬೂತ್ ರಕ್ಷಕ್ ನೇಮಕ ಮಾಡಿ ಒಳ ತಂತ್ರಗಾರಿಕೆಯನ್ನು ಬಿಜೆಪಿ ಶುರು ಮಾಡುತ್ತಿದೆ. ಯಶವಂತಪುರ 461, ಕೆ.ಆರ್.ಪುರಂ 437ಕ್ಕೂ ಹೆಚ್ಚು ಬೂತ್ ರಕ್ಷಕರಿದ್ದು, ಶಿವಾಜಿನಗರದಲ್ಲಿ 193 ಬೂತ್ ರಕ್ಷಕ್ ರನ್ನ ಮಾತ್ರ ಬಿಎಸ್‍ವೈ ನೇಮಿಸಿದ್ದಾರೆ. ಒಟ್ಟಿನಲ್ಲಿ ರಣಬೇಟೆಗಾರ ಯಡಿಯೂರಪ್ಪಗೆ ಬೂತ್ ಕಾವಲುಗಾರರಿಂದ ಸಾಥ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.