ಲಿಮಾ: ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯಿಂದ ಕೆಳಗುರುಳಿ ಪೆಸಿಫಿಕ್ ಸಾಗರಕ್ಕೆ ಬಿದ್ದ ಪರಿಣಾಮ 48 ಮಂದಿ ಸಾವನ್ನಪ್ಪಿದ್ದು, 6 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಪೆರುವಿನಲ್ಲಿ ಸಂಭವಿಸಿದೆ.
ಪಸಾಮಾಯೊದ ಲಿಮಾದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಪ್ಯಾನ್ ಅಮೆರಿಕ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಯಾನ್ ಮಾರ್ಟಿನ್ ಕಂಪೆನಿಗೆ ಸೇರಿ ಬಸ್ ಇದಾಗಿದ್ದು, ಟ್ರ್ಯಾಕ್ಟರ್ ಟ್ರೇಲರ್‍ಗೆ ಡಿಕ್ಕಿಯಾಗಿ 330 ಅಡಿಯ ಮಹಾಸಾಗರಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶ ಪೆಸಿಫಿಕ್ ಸಾಗರದ ಮೇಲಿದ್ದು, ಡೆವಿಲ್ಸ್ ಕರ್ವ್ ಎಂದೇ ಕರೆಯಲಾಗುತ್ತದೆ.
Advertisement
Advertisement
ಬಸ್ಸಿನಲ್ಲಿ ಒಟ್ಟು 57 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಹುವಾವ್ರಾದಿಂದ ಪೆರುವಿನ ರಾಜಧಾನಿ ಲಿಮಾಗೆ ತೆರಳುತ್ತಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.
Advertisement
ಸಾಗರಕ್ಕೆ ಬಿದ್ದ ರಭಸಕ್ಕೆ 48 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಮಾರು 12 ಕ್ಕೂ ಅಧಿಕ ದೇಹಗಳು ಬಸ್‍ನ ಒಳಗಡೆ ಸಿಲುಕಿಗೊಂಡಿತ್ತು. ಅಪಘಾತದಲ್ಲಿ ಬದುಕಿದವರ ರಕ್ಷಣೆಗಾಗಿ 100 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿತ್ತು.
Advertisement