ನವದೆಹಲಿ: ಭಾರತದ ದೇಶೀಯ ಕ್ರಿಕೆಟ್ ಆಟಗಾರ ಪ್ರವೀಣ್ ತಾಂಬೆಯವರು ತಮ್ಮ 48ನೇ ವಯಸ್ಸಿನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.
ಸಿಪಿಎಲ್-2020 ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಆದರೆ ಸಿಪಿಎಲ್‍ನ 8ನೇ ಅವೃತ್ತಿ ಅಗಸ್ಟ್ 18ರಿಂದ ಆರಂಭವಾಗಿದೆ. 2013ರಲ್ಲಿ ಅಧಿಕೃತವಾಗಿ ಆರಂಭಗೊಂಡ ಈ ಟೂರ್ನಿಯಲ್ಲಿ ಪ್ರಪಂಚದ ವಿವಿಧ ದೇಶದ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಾರೆ. ಆದರೆ ಇಲ್ಲಿಯವರೆಗೂ ಯಾವೊಬ್ಬ ಭಾರತೀಯ ಕ್ರಿಕೆಟ್ ಆಟಗಾರನೂ ಈ ಟೂರ್ನಿಯಲ್ಲಿ ಆಡಿರಲಿಲ್ಲ.
Advertisement
Advertisement
ಆದರೆ ಕೇವಲ ಐಪಿಎಲ್ ಮತ್ತು ದೇಶೀಯ ಟೂರ್ನಿಯಲ್ಲಿ ಗುರುತಿಸಿಕೊಂಡ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆಯವರು, ಮೊಟ್ಟ ಮೊದಲನೇ ಬಾರಿಗೆ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಭಾರತದಿಂದ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪ್ರವೀಣ್ ತಾಂಬೆಯವರು ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಲಿದ್ದಾರೆ.
Advertisement
Welcome to the party, India! We're delighted to see Pravin Tambe in Hero CPL for the first time at 48 years young – what a story!#CPL20 #CricketPlayedLouder #SLZvTKR pic.twitter.com/x2P73Epz2G
— CPL T20 (@CPL) August 26, 2020
Advertisement
ಭಾರತದ ಮೊದಲ ಆಟಗಾರ ಸಿಪಿಎಲ್‍ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಸಿಪಿಎಲ್ ಟೂರ್ನಿ ಆಡಳಿತ ಮಂಡಳಿ, ಸಿಪಿಎಲ್‍ಗೆ ನಿಮಗೆ ಸುಸ್ವಾಗತ ಭಾರತ. 48 ವರ್ಷದ ಪ್ರವೀಣ್ ತಾಂಬೆಯವರನ್ನು ಮೊದಲ ಬಾರಿಗೆ ಹೀರೋ ಸಿಪಿಎಲ್‍ನಲ್ಲಿ ನೋಡಲು ನಾವು ಸಂತೋಷಪಡುತ್ತೇವೆ ಎಂದು ಬರೆದುಕೊಂಡಿದೆ. ಸಿಪಿಎಲ್‍ನಲ್ಲಿ ತಾಂಬೆ ಟ್ರಿನ್‍ಬಾಗೊ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ.
ಪ್ರವೀಣ್ ವಿಜಯ್ ತಾಂಬೆಯವರು ಭಾರತೀಯ ದೇಶೀಯ ಕ್ರಿಕೆಟಿಗರಾಗಿದ್ದು, ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. 2013ರ ಮೇನಲ್ಲಿ ನಡೆದ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಮೊದಲ ಪಂದ್ಯವನ್ನು ಆಡಿದ್ದರು. ಈ ಮೂಲಕ ಐಪಿಎಲ್ ಆಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್‍ನಲ್ಲಿ 33 ಪಂದ್ಯಗಳನ್ನು ಆಡಿರುವ ತಂಬೆ 28 ವಿಕೆಟ್ ಗಬಳಿಸಿದ್ದಾರೆ. ಸದ್ಯ ನ್ಯೂ ಬಾಂಬೆಯ ಡಿವೈ ಪಾಟೀಲ್ ಸ್ಪೋಟ್ರ್ಸ್ ಅಕಾಡೆಮಿ ಬಿ ತಂಡದ ನಾಯಕರಾಗಿದ್ದಾರೆ.
Save this for the trivia question later.
Who was the first Indian to take a wicket in the #CPL? ????
Pravin Tambe! ???? pic.twitter.com/ZiHMU0NNd4
— SportsAdda (@sportsadda_) August 26, 2020