– ರಾಜಸ್ಥಾನಕ್ಕೆ 222 ರನ್ ಗುರಿ
ಮುಂಬೈ: ನಾಯಕ ಕೆಎಲ್ ರಾಹುಲ್ ಮತ್ತು ದೀಪಕ್ ಹೂಡಾ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ 22 ರನ್ ಗಳಿಸಿದ್ದಾಗ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ಜೊತೆ ಸೇರಿದ ಕ್ರಿಸ್ ಗೇಲ್ 40 ರನ್(28 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
Advertisement
Advertisement
ಮೂರನೇ ವಿಕೆಟ್ಗೆ ಒಂದಾದ ರಾಹುಲ್ ಮತ್ತು ದೀಪಕ್ ಹೂಡಾ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಲು ಆರಂಭಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಚಚ್ಚಿದ ಈ ಜೋಡಿ ಕೇವಲ 47 ಎಸೆತದಲ್ಲಿ 105 ರನ್ ಪೇರಿಸಿತು.
Advertisement
ಕ್ರೀಸ್ಗೇಲ್ ಔಟಾದಾಗ ತಂಡದ ಮೊತ್ತ 9.5 ಓವರ್ಗೆ 2 ವಿಕೆಟ್ ನಷ್ಟಕ್ಕೆ 89 ರನ್ ಆಗಿತ್ತು. 17.3 ಓವರ್ನಲ್ಲಿ ದೀಪಕ್ ಹೂಡಾ ಔಟಾದಾಗ ಪಂಜಾಬ್ ತಂಡದ ರನ್ 194 ಆಗಿತ್ತು. ದೀಪಕ್ ಹೂಡಾ 20 ಎಸೆತಗಳಿಗೆ ಅರ್ಧಶತಕ ಹೊಡೆದು ಅಂತಿಮವಾಗಿ 64 ರನ್(28 ಎಸೆತ, 4 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು.
Advertisement
ಇತ್ತ ರಾಹುಲ್ 30 ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರೆ ಅಂತಿಮವಾಗಿ 91 ರನ್(50 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ತೆವಾಟಿಯಾ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್ಗೆ ಔಟಾದರು.
ದೀಪಕ್ ಹೂಡಾ ಮತ್ತು ಕೆಎಲ್ ರಾಹುಲ್ ಆರ್ಭಟವನ್ನು ನಿಯಂತ್ರಿಸಲು 8 ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ರನ್ ಏರಿದ್ದು ಹೇಗೆ?
50 ರನ್ – 39 ಎಸೆತ
100 ರನ್ – 65 ಎಸೆತ
150 ರನ್ – 84 ಎಸೆತ
200 ರನ್ – 107 ಎಸೆತ
221 ರನ್ – 120 ಎಸೆತ