ಚಿತ್ರದುರ್ಗ: ಐತಿಹಾಸಿಕ ಹಿನ್ನೆಲೆಯ ಚಿತ್ರದುರ್ಗದ (Chitradurga) ಮುರುಘಾಮಠದಲ್ಲಿ (Murugha Mutt) ಕಳ್ಳತನವಾಗಿದ್ದು, ಮಠದಲ್ಲಿನ ಭಾವಚಿತ್ರಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಸರಾ ಉತ್ಸವದ ಅಂಗವಾಗಿ ನಡೆದ ಪೀಠಾರೋಹಣದ ಹಿಂದಿನ ದಿನ ಅ. 5ರ ಮಧ್ಯರಾತ್ರಿ ವೇಳೆ ರಾಜಾಂಗಣದಲ್ಲಿ ಗೋಡೆಗೆ ಹಾಕಿದ್ದ 47 ಫೋಟೋಗಳು ಕಳ್ಳತನವಾಗಿವೆ. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಹಾಗೂ ರಾಜ್ಯದ ಸಿಎಂಗಳ ಜೊತೆಗಿನ ಮುರುಘಾಶ್ರೀ ಫೋಟೋಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
Advertisement
Advertisement
ಫೋಕ್ಸೊ ಕೇಸ್‍ನಡಿ (POCSO case) ಮುರುಘಾಶ್ರೀ ಬಂಧನದ ಬಳಿಕ ಪೀಠಾಧಿಪತಿ ಬದಲಾವಣೆಗಾಗಿ ನಡೆದ ವೀರಶೈವ ಲಿಂಗಾಯತರ ಸಭೆಯಲ್ಲೂ, ಮಠದಲ್ಲಿನ ಮುರುಘಾಶ್ರೀ (Shivamurthy Murugha Sharanaru) ಫೋಟೋ ತೆಗೆದಿಡುವಂತೆ ಕೆಲವರು ಧ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ದಿಢೀರ್ ಎಂದು ಫೋಟೋಗಳು ಕಳ್ಳತನವಾಗಿವೆ. ಇದನ್ನೂ ಓದಿ: ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ
Advertisement
Advertisement
ಆ ಫೋಟೋಗಳನ್ನು ಇಬ್ಬರು ಕಳ್ಳರು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಹನವೊಂದರಲ್ಲಿ ಫೋಟೋಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನೇ: ವಿನಯ್ ಕುಲಕರ್ಣಿ