ಮುಂಬೈ: ಐಐಟಿ ಬಾಂಬೆಯ ಕೇಂದ್ರಿಯ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಿಕ್ಷಕರೊಬ್ಬರು ಮನುಷ್ಯ ಮಾದರಿಯ ರೋಬೋಟ್‍ನನ್ನು ತಯಾರಿಸಿದ್ದಾರೆ.
ಹೌದು ಶಿಕ್ಷಕ ದಿನೇಶ್ ಪಟೇಲ್ ತಯಾರಿಸಿರುವ ಈ ರೋಬೋಟ್ ಒಂಬತ್ತು ಸ್ಥಳೀಯ ಭಾಷೆಗಳನ್ನು ಮತ್ತು 38 ವಿದೇಶಿ ಭಾಷೆಗಳನ್ನು ಮಾತನಾಡುತ್ತದೆ. ಅಂದರೆ ಇಂಗ್ಲಿಷ್, ಹಿಂದಿ, ಭೋಜ್‍ಪುರಿ, ಮರಾಠಿ, ಬಾಂಗ್ಲಾ, ಗುಜರಾತಿ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ 9 ಭಾರತೀಯ ಭಾಷೆಯನ್ನು ಮಾತನಾಡುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಬಾಲಿವುಡ್‍ನ ರೋಬೋಟ್ ಸಿನಿಮಾ ನೋಡಿ ಪ್ರೇರಿತರಾದ ದಿನೇಶ್ ಪಟೇಲ್ ರೋಬೋಟ್‍ನನ್ನು ತಯಾರಿಸಿ ಅದಕ್ಕೆ ಶಾಲು ಎಂದು ಹೆಸರಿಟ್ಟಿದ್ದಾರೆ. ಈ ರೋಬೋಟ್ ನೋಡಲು ಮಹಿಳೆ ಮಾದರಿಯೇ ಇದ್ದು ಮನುಷ್ಯರಂತೆ ಮಾತನಾಡುತ್ತದೆ. ಈ ರೋಬೋಟ್‍ನನ್ನು ತಯಾರಿಸಲು ಪ್ಲಾಸ್ಟಿಕ್, ರಟ್ಟು, ಮರ, ಅಲ್ಯೂಮಿನಿಯಂ ಮುಂತಾದ ತ್ಯಾಜ್ಯ ವಸ್ತುಗಳನ್ನು ಬಳಸಿ ಸುಮಾರು 50,000 ರೂ. ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಇದನ್ನು ಸಿದ್ಧಪಡಿಸಲು ಮೂರು ವರ್ಷಗಳ ಕಾಲ ಬೇಕಾಯಿತು ಎಂದು ತಿಳಿಸಿದ್ದಾರೆ.
Advertisement
ಪಟೇಲ್‍ರವರು ಶಾಲು ವಿಷಯಗಳನ್ನು ಕಂಠ ಪಾಠ ಮಾಡುತ್ತದೆ ಹಾಗೂ ಸಾಮಾನ್ಯ ಜ್ಞಾನ, ಗಣಿತ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಅಲ್ಲದೆ ಶಾಲು ಸ್ವಾಗತವನ್ನು ಕೋರುತ್ತದೆ. ಭಾವನೆಗಳನ್ನು ತೋರಿಸುತ್ತದೆ. ನ್ಯೂಸ್ ಪೇಪರ್, ರೆಸಿಪಿ ಹೀಗೆ ಹಲವು ರೀತಿಯ ಚಟುವಟಿಕೆಗಳನ್ನು ಮಾಡುತ್ತದೆ. ಅಲ್ಲದೆ ರೋಬೋಟ್ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.
Advertisement
ಇದೀಗ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸುಪ್ರಸಿತ್ ಚಕ್ರವರ್ತಿಯವರು ರೋಬೋಟ್ ತಯಾರಿಸಿದ ವಿಚಾರವಾಗಿ ದಿನೇಶ್ ಪಟೇಲ್‍ರವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರೋಬೋಟ್ ಕುರಿತಂತೆ ಇದು ನಿಜಕ್ಕೂ ಒಂದು ದೊಡ್ಡ ಬೆಳವಣಿಗೆಯಾಗಿದ್ದು, ರೋಬೋಟ್‍ನನ್ನು ಶಿಕ್ಷಣ, ಮನರಂಜನೆ ಮತ್ತು ಇತರ ಕ್ಷೇತ್ರಗಳಲ್ಲಿ ಕೂಡ ಬಳಸಬಹುದು ಶಾಲು ಮುಂದಿನ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಬಹುದು ಎಂದು ಹೇಳಿದ್ದಾರೆ.