ಚೆನ್ನೈ: ಕೊನೆಯ ಸ್ಲಾಗ್ ಓವರ್ ಗಳಲ್ಲಿ ಬೌಲರ್ ಗಳ ಅತ್ಯುತ್ತಮ ಪ್ರದರ್ಶನದಿಂದ ಆರ್ ಸಿಬಿ ಹೈದರಾಬಾದ್ ವಿರುದ್ಧ 6 ರನ್ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.
ಗೆಲ್ಲಲು 150 ರನ್ ಗಳ ಸವಾಲು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲನ್ನು ಅನುಭವಿಸಿತು. 96 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ 46 ರನ್ ಗಳಿಸುಷ್ಟರಲ್ಲಿ 8 ವಿಕೆಟ್ ಪತನಗೊಂಡಿದ್ದರಿಂದ ಈ ಪಂದ್ಯವನ್ನು ಸೋತಿದೆ.
Advertisement
Advertisement
17ನೇ ಓವರ್ ಎಸೆದ ಶಹಬಾಜ್ ಜಾನಿ ಬೈರ್ಸ್ಟೋವ್, ಮನೀಷ್ ಪಾಂಡೆ, ಅಬ್ದುಲ್ ಸಮಾದ್ ಅವರನ್ನು ಔಟ್ ಮಾಡಿದ ಪರಿಣಾಮ ಪಂದ್ಯ ಬೆಂಗಳೂರಿನತ್ತ ತಿರುಗಿತು. 18ನೇ ಓವರಿನಲ್ಲಿ ಹರ್ಷಲ್ ಪಟೇಲ್ 7 ರನ್ ನೀಡಿದರೆ, 19ನೇ ಓವರಿನಲ್ಲಿ ಸಿರಾಜ್ 11 ರನ್ ನೀಡಿದರು. ಕೊನೆಯ ಓವರಿನಲ್ಲಿ 16 ರನ್ ಬೇಕಿತ್ತು. ಹರ್ಷಲ್ ಪಟೇಲ್ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದು ಜಯವನ್ನು ತಂದುಕೊಟ್ಟರು.
Advertisement
13ನೇ ಓವರ್ ವರೆಗೆ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, 13ನೇ ಓವರ್ನಲ್ಲಿ ವಾರ್ನರ್ ವಿಕೆಟ್ ಒಪ್ಪಿಸಿದರು. ಬಳಿಕ ಸನ್ರೈಸರ್ಸ್ ದಾಂಡಿಗರು ಮೇಲಿಂದ ಮೇಲೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಸೋಲಿಗೆ ಕಾರಣರಾದರು.
Advertisement
ಒಂದೇ ಓವರಿನಲ್ಲಿ 3 ವಿಕೆಟ್
ಶಹಬಾಝ್ ಅಹ್ಮದ್ 3, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಸನ್ ರೈಸರ್ಸ್ ದಾಂಡಿಗರನ್ನು ಕಟ್ಟಿಹಾಕಿದರು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಗೆಲುವು ಸಾಧಿಸಲು ಸಾಧ್ಯವಾಯಿತು. 16ನೇ ಓವರ್ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಸನ್ರೈಸರ್ಸ್ ತಂಡದಲ್ಲಿ ನಡುಕ ಹುಟ್ಟಿಸಿದರು. ಬಳಿಕ ಮೇಲಿಂದ ಮೇಲೆ ವಿಕೆಟ್ ಉರುಳಿದವು.
ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗಲಿಲ್ಲ. ತಂಡದ ಮೊತ್ತ 19 ಇದ್ದಾಗ ಪಡಿಕ್ಕಲ್ ಔಟಾದರು. ಬಳಿಕ 6ನೇ ಓವರ್ ಆರಂಭದಲ್ಲಿ ತಂಡ 47 ರನ್ಗಳ ಮೊತ್ತವನ್ನು ಕಲೆ ಹಾಕಿದಾಗ ಶಹಬಾಝ್ ಅಹ್ಮದ್ ಔಟಾದರು. ಮೂರನೇ ವಿಕೆಟಿಗೆ ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್ ವೆಲ್ ಉತ್ತಮ ಜೊತೆಯಾಟವಾಡಿ 38 ಎಸೆತಗಳಿಗೆ 44 ರನ್ ಸಿಡಿದರು.
ಮ್ಯಾಕ್ಸ್ ವೆಲ್ ತಾಳ್ಮೆಯಾಟ
ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕಾಯ್ದುಕೊಂಡು ಕೊನೆಯವರಿಗೂ ತಾಳ್ಮೆಯಿಂದ ಆಡುವ ಮೂಲಕ ತಂಡದ ರನ್ ಹೆಚ್ಚಿಸಲು ಶ್ರಮಿಸಿದರು. 59 ರನ್ (41 ಎಸೆತ, 5 ಬೌಂಡರಿ, 3 ಸಿಕ್ಸ್) ಚಚ್ಚಿ ತಂಡಕ್ಕೆ ಬೃಹತ್ ಮೊತ್ತದ ರನ್ಗಳ ಕೊಡುಗೆ ನೀಡಿದರು. ಆದರೆ 19ನೇ ಓವರ್ನ ಕೊನೇಯ ಬಾಲ್ನಲ್ಲಿ ಕ್ಯಾಚ್ ನೀಡಿದರು.
ವಿಕೆಟ್ ಕಾಯ್ದುಕೊಂಡು ಆಟವಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ 33 ರನ್(29 ಎಸೆತ, 4 ಬೌಂಡರಿ) ಚಚ್ಚಿ 12ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು. ಎಬಿ ಡಿ’ವಿಲಿಯರ್ಸ್ ಸಹ 13.4ನೇ ಓವರ್ನಲ್ಲಿ ಕೇವಲ 1 ರನ್(5 ಬಾಲ್) ಹೊಡೆದು ಔಟಾದರು. ಈ ಮೂಲಕ ಆರ್ ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತು.
2ನೇ ಓವರ್ ಮುಕ್ತಾಯದ ವೇಳೆಗೆ ದೇವದತ್ ಪಡಿಕ್ಕಲ್ 11 ರನ್ (13 ಎಸೆತ, 2 ಬೌಂಡರಿ) ಹೊಡೆದು ಕ್ಯಾಚ್ ನೀಡಿದರು. ಶಹಬಾಝ್ ಅಹ್ಮದ್ ಸಹ 14 ರನ್ (10 ಎಸೆತ, 1 ಸಿಕ್ಸ್) ಗಳಿಸಿ 6ನೇ ಓವರ್ ಆರಂಭದಲ್ಲಿ ಔಟಾದರು. ವಾಶಿಂಗ್ಟನ್ ಸುಂದರ್ 8 ರನ್(11 ಎಸೆತ, 1 ಬೌಂಡರಿ) ಸಿಡಿಸಿ 15.5ನೇ ಓವರ್ನಲ್ಲಿ ಕ್ಯಾಚ್ ನೀಡಿದರು. ಡ್ಯಾನ್ ಕ್ರಿಸ್ಟಿಯನ್ 1 ರನ್(2 ಎಸೆತ) ಹೊಡೆದು 16.4ನೇ ಓವರ್ನಲ್ಲಿ ಔಟಾದರು. ಕೈಲ್ ಜೇಮಿಸನ್ 12ರನ್ (9 ಎಸೆತ, 4 ಬೌಂಡರಿ) ಸಿಡಿಸಿ ಕೊನೇಯ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು.
ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್, 54 ರನ್(37 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚುವ ಮೂಲಕ ತಂಡಕ್ಕೆ ಭರ್ಜರಿ ರನ್ಗಳ ಕೊಡುಗೆ ನೀಡಿದರು. ಆದರೆ 13.2ನೇ ಓವರ್ನಲ್ಲಿ ಕ್ಯಾಚ್ ನೀಡಿದರು. ಬಳಿಕ ಜಾನಿ ಬೈರ್ಸ್ಟೋವ್ ಸಹ 12 ರನ್(13 ಎಸೆತ, 1 ಬೌಂಡರಿ) ಹೊಡೆದು 16ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು. ಆರಂಭದಿಂದಲೂ ತಾಳ್ಮೆಯ ಆಟವಾಡಿದ್ದ ಮನೀಶ್ ಪಾಂಡೆ 38(39 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ಇದೇ ಓವರ್ನಲ್ಲಿ ಕ್ಯಾಚ್ ನೀಡಿದರು. ಅಬ್ದುಲ್ ಸಮದ್ ಸಹ 2 ಎಸೆತ ಎದುರಿಸಿ ರನ್ ಗಳಿಸದೆ ಔಟಾದರು.
ವಿಜಯ್ ಶಂಕರ್ 3 ರನ್ (5 ಎಸೆತ) ಹೊಡೆದು 17ನೇ ಓವರ್ನ ಕೊನೇಯ ಬಾಲ್ನಲ್ಲಿ ಕ್ಯಾಚ್ ನೀಡಿದರು. ಜೇಸನ್ ಹೋಲ್ಡರ್ 4 ರನ್(5 ಎಸೆತ) ಬಾರಿಸಿ 18.3ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ರಶೀದ್ ಖಾನ್ 17 ರನ್(9 ಎಸೆತ, 1ಬೌಂಡರಿ, 1 ಸಿಕ್ಸ್) ಚಚ್ಚಿ ತಂಡವನ್ನು ಮೇಲೆತ್ತಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. 19 ಓವರ್ ಕೊನೆಯಲ್ಲಿ ರನ್ ಔಟ್ ಆದರು. ಶಹಬಾಝ್ ನದೀಮ್ ಸಹ ಇದೇ ಓವರ್ನಲ್ಲಿ ಕ್ಯಾಚ್ ನೀಡುವ ಮೂಲಕ ಸೊನ್ನೆಗೆ ಔಟಾದರು.