ಲಕ್ನೋ: ಸಂಭಲ್ (Sambhal) ಡಿಎಂ ಆದೇಶದಂತೆ ಶಾಹಿ ಜಾಮಾ ಮಸೀದಿ (Shahi Jama Masjid) ಸುತ್ತಲಿನ ಒತ್ತುವರಿ ಜಾಗಗಳ ತೆರವು ಕಾರ್ಯ ಮುಂದುವರೆದಿದೆ.
ಉತ್ತರ ಪ್ರದೇಶದ (Uttar Pradesh) ಸಂಭಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಮಸೀದಿ ಭೇಟಿಯ ಬಳಿಕ ಇಲ್ಲಿನ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು.
Advertisement
ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಮಸೀದಿ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದ್ದು, 46 ವರ್ಷಗಳಷ್ಟು ಹಿಂದಿನ ಹಳೆಯ ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಪತ್ತೆಯಾಗಿವೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ಸ್ಥಳಗಳನ್ನು ಕೂಡ ಈ ಕಾರ್ಯಾಚರಣೆಯು ಗುರಿಯಾಗಿಸಿದೆ.ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ – ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರು ಅರೆಸ್ಟ್
Advertisement
Advertisement
ಸಂಭಲ್ ಡಿಎಂ ಮಾತನಾಡಿ, ಒತ್ತುವರಿ ಕಾರ್ಯ ಬಹುದಿನಗಳಿಂದ ನಡೆದಿದೆ. ಇದನ್ನು ಸರಿಪಡಿಸುವ ಉದ್ದೇಶದಿಂದ ನ್ಯಾಯಾಲಯದ ಆದೇಶದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಸೀದಿಯ ಪರಿಶೀಲನೆ ನಡೆಸಿತ್ತು. ಇದರಿಂದಾಗಿ ಸಂಭಲ್ ಪ್ರದೇಶದ ಜನರು ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ಘರ್ಷಣೆಗಳಾಗಿ ತಿರುಗಿತ್ತು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು ಎಂದು ತಿಳಿಸಿದರು.
Advertisement
ಒತ್ತುವರಿ ತಡೆಯುವ ಉದ್ದೇಶದಿಂದ ಮೂರು ತಿಂಗಳುಗಳ ಕಾಲ ಅಭಿಯಾನ ನಡೆಯಲಿದ್ದು, ಯಾವುದೇ ಉಲ್ಲಂಘನೆಯಾದರೂ ಕೂಡ ಅದನ್ನು ನೆಲಸಮಗೊಳಿಸಲಾಗುವುದು. ಅತಿಕ್ರಮಣ ಹಾಗೂ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳ ಬಗ್ಗೆ ಎಫ್‌ಐಆರ್ ದಾಖಲಾಗುತ್ತಿದ್ದು, ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಒತ್ತುವರಿಗೆ ಸಂಬಂಧಿಸಿದಂತೆ ಒಟ್ಟು 1221 ಎಫ್‌ಐಆರ್ ದಾಖಲಾಗಿವೆ ಎಂದರು.
ಸಂಭಲ್ ಆಡಳಿತವು ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲ ಉದ್ದೇಶವನ್ನು ಹೊಂದಿದೆ. ಈಗಾಗಲೇ ಡಿ.09 ರಂದು ಪೊಲೀಸರು ನಡೆಸಿದ ದಾಳಿಯಲ್ಲಿ ಒಟ್ಟು 13 ಸ್ಥಳಗಳಲ್ಲಿ ಬಂದೂಕು ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚುವರಿ ಎಸ್‌ಪಿ ಶ್ರೀಶ್‌ಚಂದ್ರ ಮಾತನಾಡಿ, ಕೆಲವರು ಮನೆ ನಿರ್ಮಿಸಿ ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು. ಕಾರಣಾಂತರಗಳಿAದ ಅವರು ಈ ಪ್ರದೇಶವನ್ನು ತೊರೆದರು. ದೇವಾಲಯದ ಸಮೀಪದಲ್ಲಿಯೇ ಪುರಾತನ ಬಾವಿಯ ಬಗ್ಗೆಯೂ ಮಾಹಿತಿ ಇದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್