ಖಾರ್ಟೂಮ್: ಉಕ್ರೇನಿಯನ್ ನಿರ್ಮಿತ ಮಿಲಿಟರಿ ವಿಮಾನವು ಸುಡಾನ್‌ನ ಓಮ್‌ಡರ್ಮನ್ ನಗರದಲ್ಲಿ ಮಂಗಳವಾರ ಪತನಗೊಂಡಿದ್ದು, ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ.
ಓಮ್‌ಡರ್ಮನ್‌ನ ಉತ್ತರದಲ್ಲಿರುವ ವಾಡಿ ಸಯೀದ್ನಾ ವಾಯುನೆಲೆಯಿಂದ ಆಂಟೊನೊವ್ ವಿಮಾನವು ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ. ಸುಡಾನ್ ಸೇನೆಯು ಸಾವುನೋವುಗಳನ್ನು ದೃಢಪಡಿಸಿತು. ಆದರೆ, ಅಪಘಾತದ ಕಾರಣದ ಬಗ್ಗೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಿಲ್ಲ.
Advertisement
ಮೃತರ ಶವಗಳನ್ನು ಓಮ್ದುರ್ಮನ್‌ನ ನೌ ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಾನ ಪತನವಾದ ಕರಾರಿ ಜಿಲ್ಲೆಯ ಪ್ರದೇಶದಲ್ಲಿ ಹಲವಾರು ವಸತಿ ಮನೆಗಳಿಗೆ ಹಾನಿಯಾಗಿದೆ.
Advertisement
ಮೇಜರ್ ಜನರಲ್ ಬಹರ್ ಅಹ್ಮದ್ ಬಹರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಅವದ್ ಅಯೂಬ್ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳು ಹಾಗೂ ವಿಮಾನದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.