ಹೈದರಾಬಾದ್: ತೆಲಂಗಾಣ ಸಾರಿಗೆ ಇಲಾಖೆಯಲ್ಲಿ ಈ ಹಿಂದೆ ಎಂದೂ ನಡೆಯದ ಭಾರೀ ದುರಂತವೊಂದು ಸಂಭವಿಸಿದ್ದು, ಬಸ್ ಪ್ರಪಾತಕ್ಕೆ ಬಿದ್ದ ಪರಿಣಾಮ 51 ಮಂದಿ ಮೃತಪಟ್ಟಿದ್ದಾರೆ.
83 ಜನ ಯಾತ್ರಿಗಳಿದ್ದ ಬಸ್ಸುವೊಂದು ಜಗ್ತಿಯಾಲ್ ಜಿಲ್ಲೆಯ ಕೊಂಡಗಟ್ಟು ಬೆಟ್ಟದ ಆಂಜನೇಯ ದೇವಸ್ಥಾನದಿಂದ ಮರಳುತ್ತಿತ್ತು. ಈ ವೇಳೆ ಶನಿವಾರಪೇಟೆ ಗ್ರಾಮದ ಸಮೀಪದ ಘಾಟ್‍ನಲ್ಲಿ ಬ್ರೇಕ್ ಫೇಲ್ ಆದ ಪರಿಣಾಮ ಪ್ರಪಾತಕ್ಕೆ ಜಾರಿ ಬಿದ್ದಿದೆ.
Advertisement
ಅಪಘಾತದಲ್ಲಿ ಚಾಲಕ ಸೇರಿದಂತೆ 4 ಮಕ್ಕಳು, 21 ಜನ ಮಹಿಳೆಯರು ಹಾಗೂ 21 ಮಂದಿ ಪುರುಷರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು.
Advertisement
#UPDATE: Sindhu Sharma, SP Jagtial, says, "45 people have died so far. Injured have been admitted to nearby government hospitals. Rescue operation is underway." A state-run RTC bus accident had occurred near Kondaagattu, earlier today. #Telangana pic.twitter.com/VRW1Q8FaCC
— ANI (@ANI) September 11, 2018
Advertisement
ಚಿಕ್ಕಪುಟ್ಟ ಗಾಯವಾಗಿರುವವನ್ನು ಜಗ್ತಿಯಾಲ್ ಜಿಲ್ಲಾಸ್ಪತ್ರೆಗೆ, ಇನ್ನು ಸ್ಥಿತಿ ಗಂಭೀರವಾಗಿವ ಪ್ರಯಾಣಿಕರನ್ನು ಕರೀಂನಗರ ಹಾಗೂ ಹೈದರಾಬಾದ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಬೆಳಗ್ಗೆ 11.45 ಗಂಟೆಗೆ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎ.ಶರತ್ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv