ತೈಪೆ: ಅಪಾರ್ಟ್ಮೆಂಟ್‌ಗೆ ಬೆಂಕಿ ತಗುಲಿ ಸುಮಾರು 46 ಜನರು ಸಾವನ್ನಪ್ಪಿದ್ದು, 41 ಜನರಿಗೆ ಗಾಯವಾಗಿರುವ ಘಟನೆ ಗುರುವಾರ ದಕ್ಷಿಣ ತೈವಾನ್‍ನ ನಗರದ ಕಾಹೊಹ್‍ಸಿಯುಂಗ್‍ನಲ್ಲಿ ನಡೆದಿದೆ.
Advertisement
ಕಾಹೊಹ್‍ಸಿಯುಂಗ್‍ನಲ್ಲಿ 13 ಅಂತಸ್ತಿನ ಅಪಾಟ್ರ್ಮೆಂಟ್‍ಗೆ ಇಂದು ಬೆಳಗ್ಗೆ ಬೆಂಕಿ ತಗುಲಿದ್ದು, ಬೇಗವಾಗಿ ಮಹಡಿಗಳಿಗೆ ಬೆಂಕಿ ಹತ್ತಿಕೊಂಡಿದೆ. ಈ ಪರಿಣಾಮ ಕಟ್ಟಡದಲ್ಲಿ ವಾಸಿಸುತ್ತಿದ್ದ 46 ಜನರು ಸಾವನ್ನಪ್ಪಿದ್ದು, 41 ಜನರಿಗೆ ಗಾಯವಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದಳದವರು ಆಗಮಿಸಿದ್ದು, ಅಗ್ನಿಯನ್ನು ನಿಯಂತ್ರಣಕ್ಕೆ ತರುವ ಮುನ್ನ ಅನೇಕ ಮಹಡಿಗಳಿಗೆ ಅಗ್ನಿ ಉಲ್ಬಣಗೊಂಡಿದೆ. ಇದನ್ನೂ ಓದಿ: ಬಂಡೆಯಿಂದ ಜಾರಿ ಬಿದ್ದು ಬನ್ನೇರುಘಟ್ಟದ ಮರಿಯಾನೆ ಸಾವು
Advertisement
Advertisement
ಈ ಕುರಿತು ಅಗ್ನಿಶಾಮಕದಳದ ಅಧಿಕಾರಿ ಮಾತನಾಡಿದ್ದು, ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಒಟ್ಟು 46 ಜನರು ಸಾವನ್ನಪ್ಪಿದ್ದು, 41 ಜನರಿಗೆ ಗಾಯವಾಗಿದೆ. ಬೆಂಕಿಯ ವೇಗ ಹೆಚ್ಚಾಗಿದ್ದರಿಂದ ಅದನ್ನು ನಂದಿಸಲು ನಾವು ಹರಸಾಹಸ ಪಡುತ್ತಿದ್ದೇವೆ ಎಂದಿದ್ದಾರೆ.
Advertisement
ಈ ಕಟ್ಟಡದ ಕಿಟಕಿಗಳಿಂದ ಹೊಗೆ ಹೆಚ್ಚಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ಸಾವುಗಳು ಏಳರಿಂದ ಹನ್ನೊಂದು ಮಹಡಿಯಲ್ಲಿ ಆಗಿದೆ. ಇದು ವಸತಿ ಅಪಾಟ್ರ್ಮೆಂಟ್ ಆಗಿದ್ದು, ಇನ್ನೂ ಮೊದಲ ಐದು ಮಹಡಿಗಳು ವಾಣಿಜ್ಯ ಬಳಕೆಗಾಗಿ ಇತ್ತು. ಘಟನೆ ನಡೆದ ವೇಳೆ ಈ ಮಹಡಿಗಳಲ್ಲಿ ಜನರಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ