ಉಡುಪಿ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಉಡುಪಿಯಲ್ಲಿ ಇಂದು ವಿಶ್ವದಾಖಲೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಒಂದೇ ವೇದಿಕೆಯಲ್ಲಿ 4500 ಮಂದಿ ಸಂಪೂರ್ಣ ವಂದೇ ಮಾತರಂ ಹಾಡನ್ನು ಗಾಯನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡುವ ಹಾದಿಯಲ್ಲಿದ್ದಾರೆ.
ಜಿಲ್ಲೆಯ ಸಂವೇದನಾ ಫೌಂಡೇಶನ್ಸ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಮಲ್ಪೆ ಪೊಲೀಸ್ ಸ್ಟೇಷನ್ ಮೈದಾನದಿಂದ ಬೃಹತ್ ಮೆರವಣಿಗೆಯಲ್ಲಿ 1,750 ಅಡಿ ಉದ್ದದ ತಿರಂಗವನ್ನು ಸುಮಾರು ಒಂದು ಸಾವಿರ ಮಕ್ಕಳು ಹೊತ್ತು ಸಾಗುತ್ತಾರೆ. ಸುಮಾರು 10 ಸಾವಿರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಾಷ್ಟ್ರ ಧ್ವಜಕ್ಕೆ ಹೂವು ಹಾಕಿ ಗೌರವ ವಂದನೆ ಸಲ್ಲಿಸಲಿದ್ದಾರೆ.
Advertisement
Advertisement
ಮಲ್ಪೆ ಬೀಚ್‍ವರೆಗೆ ಮೆರವಣಿಗೆ ಸಾಗಿ ಅಲ್ಲಿ 4500 ವಿದ್ಯಾರ್ಥಿಗಳು ಒಂದೇ ಬಾರಿ ವಂದೇ ಮಾತರಂ ಹಾಡುತ್ತಾರೆ. ಸಾಮೂಹಿಕ ಹಾಡಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕಾಗಿ ಆಂಧ್ರಪ್ರದೇಶದಿಂದ ಅರ್ಧ ಕಿಲೋಮೀಟರ್ ಉದ್ದದ ತಿರಂಗವನ್ನು ತರಿಸಿಕೊಳ್ಳಲಾಗಿದೆ.
Advertisement
ಕಾರ್ಯಕ್ರಮದಲ್ಲಿ 40 ಭಜನಾ ಮಂಡಳಿ, ವಿವಿಧ ಸಂಘ ಸಂಸ್ಥೆಗಳು, 24 ಪದವಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸೇವ್ ನೇಚರ್ ಎಂಬ ಬ್ಯಾಡ್ಜ್, ಸಮವಸ್ತ್ರ ತೊಟ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ರಿಂದ ಸಂಜೆ ಆರು ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.
Advertisement
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ 25 ಸಾವಿರ ಜನ ಪಾಲ್ಗೊಳ್ಳಲಿದ್ದು, ಸಿನೆಮಾ ಕ್ಷೇತ್ರದ 20 ಹಿನ್ನೆಲೆ ಗಾಯಕರು ವಂದೇ ಮಾತರಂ ಹಾಡಿಗೆ ಧನಿಗೂಡಿಸಲಿದ್ದಾರೆ. ಮೂವರು ವಿದೇಶಿಗರು ವಂದೇ ಮಾತರಂ ಹಾಡೋದು ಮತ್ತೊಂದು ವಿಶೇಷ. ಟ್ಯಾಬ್ಲೋಗಳು, ಸಾಂಸ್ಕೃತಿಕ ತಂಡಗಳು, ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.