45 ಸಾವಿರ ಕಿ.ಮೀ. ಬರೆದು ಟ್ರೋಲ್‍ಗೆ ಗುರಿಯಾದ ಜೆಪಿ ನಡ್ಡಾ

Public TV
1 Min Read
JP NADDA 1

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾಗಿ ಟ್ವಿಟ್ ಮಾಡಿದ ನಡ್ಡಾ ಅವರು, ಡಾ.ಮನಮೋಹನ್ ಸಿಂಗ್ ಅದೇ ಪಕ್ಷಕ್ಕೆ ಸೇರಿದವರು. ಅಸಹಾಯಕವಾಗಿ 43,000 ಕಿ.ಮೀ.ಗಿಂತಲೂ ಹೆಚ್ಚು ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಒಪ್ಪಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಚೀನಾಗೆ ಯಾವುದೇ ಪ್ರತಿರೋಧ ಒಡ್ಡದೆ ಅಸಹ್ಯವಾದ ಕಾರ್ಯತಂತ್ರ ಮತ್ತು ಪ್ರಾದೇಶಿಕ ಶರಣಾಗತಿಯನ್ನು ಕಂಡಿತು. ಸಮಯ ಮತ್ತೆ ನಮ್ಮ ಪಡೆಗಳನ್ನು ಕುಗ್ಗಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ನಡ್ಡಾ ಅವರ ಟ್ವೀಟ್ ನೋಡಿದ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ನಿಮ್ಮ ಪ್ರಕಾರ ಭಾರತ ಭೂಮಿಗಿಂತ ದೊಡ್ಡದಾಗಿದೆ ಅಂತ ಆಯ್ತು” ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಮತ್ತೊಬ್ಬರು, “ಭೂಮಿಯ ಒಟ್ಟು ಸುತ್ತಳತೆ 40,075 ಕಿ.ಮೀ. ಆದರೂ 43 ಸಾವಿರ ಕಿ.ಮೀ. ಭೂಮಿಯನ್ನು ಚೀನಾಕೆ ಹೇಗೆ ಒಪ್ಪಿಸಲು ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.

ಜೆಪಿ ನಡ್ಡಾ ಅವರು ಚೀನಾಗೆ 43 ಸಾವಿರ ಕಿ.ಮೀ. ಹೊಸ ಗ್ರಹವನ್ನು ಉಡುಗೊರೆ ನೀಡುತ್ತಿದ್ದಾರೆ. ನಡ್ಡಾ ಜಿ, ಕಾಂಗ್ರೆಸ್ ನಿಜವಾಗಿಯೂ ಕೆಟ್ಟದ್ದನ್ನು ಮಾಡಿರಬೇಕು. ಕರಾಚಿ ಮತ್ತು ಬೀಜಿಂಗ್ ನಡುವಿನ ಅಂತರವು ಕೇವಲ 4860 ಕಿ.ಮೀ. ಆಗಿದೆ. ಹಾಗಾದರೆ 43,000 ಕಿ.ಮೀ. ಅಂತ ಹೇಗೆ ಹೇಳಲು ಸಾಧ್ಯ ಎಂದು ಅನೇಕ ನೆಟ್ಟಿರು ಪ್ರಶ್ನಿಸಿದ್ದಾರೆ.

ಆದರೆ ಜೆಪಿ ನಡ್ಡಾ ಅವರ ಟ್ವೀಟ್ ಅನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 43,000 ಚದರ ಕಿ.ಮೀ ಭೂಭಾಗವನ್ನು ಚೀನಾಗೆ ಒಪ್ಪಿಸಲಾಗಿದೆ. ವ್ಯಂಗ್ಯವಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *