ಬೆಂಗಳೂರು: ನಿನ್ನೆಗಿಂತ ಇಂದು ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. 4,439 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 10,106 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 32 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 8,02,817ಕ್ಕೆ ಏರಿಕೆಯಾಗಿದೆ. ಈ ಪೈಕಿ 7,10,843 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 81,050 ಸಕ್ರಿಯ ಪ್ರಕರಣಗಳಿವೆ. ಶನಿವಾರ 4,471 ಮಂದಿಗೆ ಸೋಂಕು ಬಂದಿತ್ತು.
ಒಟ್ಟು ಇಲ್ಲಿಯವರೆಗೆ 10,905 ಮಂದಿ ಮೃತಪಟ್ಟಿದ್ದು 939 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 17,729 ಆಂಟಿಜನ್ ಟೆಸ್ಟ್, 82,782 ಆರ್‌ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,00,511 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 73,81,601 ಕೋವಿಡ್ 19 ಪರೀಕ್ಷೆ ಕರ್ನಾಟಕದಲ್ಲಿ ನಡೆದಿದೆ.
ಎಂದಿನಂತೆ ಬೆಂಗಳೂರು ನಗರದಲ್ಲಿ 2,468, ಬೆಂಗಳೂರು ಗ್ರಾಮಾಂತರ 234, ತುಮಕೂರು 141, ಮೈಸೂರು 140, ದಕ್ಷಿಣ ಕನ್ನಡ 139 ಮಂದಿಗೆ ಸೋಂಕು ಬಂದಿದೆ.
ಬೆಂಗಳೂರು ನಗರದಲ್ಲಿ 432, ಬಳ್ಳಾರಿ 61, ಹಾಸನ 44, ಚಾಮರಾಜನಗರದಲ್ಲಿ 38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.