ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ 42 ಮಂದಿ ದುರ್ಮರಣಕ್ಕೀಡಾಗಿದ್ದು, 76 ಮಂದಿ ಗಾಯಗೊಂಡಿದ್ದಾರೆ.
ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನದ (ಐಇಎ) ವಿಪತ್ತು ನಿರ್ವಹಣಾ ವ್ಯವಹಾರಗಳ ರಾಜ್ಯ ಸಚಿವಾಲಯವು, ಕಳೆದ 20 ದಿನಗಳಿಂದ ಹಿಮಪಾತದ ತೀವ್ರತೆಯಿಂದಾಗಿ 2,000 ಮನೆಗಳು ನಾಶವಾಗಿವೆ. ಹಿಮಪಾತದಿಂದಾಗಿ 42 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!
Advertisement
Advertisement
ಭಾರೀ ಹಿಮಪಾತದಿಂದಾಗಿ ನೂರಾರು ಜನರು ಹಲವು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೇ ಹೆಚ್ಚಿನ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದೆ.
Advertisement
ವಿವಿಧ ಏಜೆನ್ಸಿಗಳು ಕೂಡ ಸಂತ್ರಸ್ತರ ನೆರವಿಗೆ ಧಾವಿಸಿವೆ. ಹಿಮಪಾತಕ್ಕೂ ಮೊದಲು ಪಶ್ಚಿಮ ಬದ್ಘಿಸ್ ಪ್ರಾಂತ್ಯದಲ್ಲಿ ಸಂಭವಿಸಿದ ಎರಡು ಭೂಕಂಪಗಳಲ್ಲಿ 28 ಮಂದಿ ಮೃತಪಟ್ಟಿದ್ದರು. ಆಗ 1 ಸಾವಿರ ಮನೆಗಳು ನಾಶವಾಗಿದ್ದವು ಎಂದು ಹೇಳಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ
Advertisement
ತಾಲಿಬಾನ್ ಆಡಳಿತದಿಂದಾಗಿ ನಿರುದ್ಯೋಗ, ಹಸಿವು, ಬರದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಜನತೆಗೆ ಹಿಮಪಾತವು ಮತ್ತೊಂದು ಹೊಡೆತ ನೀಡಿದೆ.