ಲಕ್ನೋ: ದುರ್ಗಾ ಪೂಜೆಗೆ ಹಾಕಿದ್ದ ಪೆಂಡಾಲ್‍ಗೆ (Durga Puja Pandal) ಬೆಂಕಿ ಹೊತ್ತುಕೊಂಡು ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಭದೋಹಿಯಲ್ಲಿ (Bhadohi) ನಡೆದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ಅವರು, ಔರೈ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಾಪೂಜಾ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಒಟ್ಟು 66 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್‍ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ
ಇದೀಗ ಘಟನಾ ಸ್ಥಳಕ್ಕೆ ಡಿಎಂ ಮತ್ತು ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 33 ಜನರನ್ನು ಸಮೀಪದ ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಸುದ್ದಿ – ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆ ಪೂಜೆ
ರಾತ್ರಿ 9.30ರ ಸುಮಾರಿಗೆ ಆರತಿ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಸುಮಾರು 300 ಮಂದಿ ಪೆಂಡಾಲ್ ಕೆಳಗಿದ್ದರು. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಕಾಣಿಸುತ್ತದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.