ಬೆಂಗಳೂರು: 42.63 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ (Mantri Square Mall) ಮೇಲೆ ಬಿಬಿಎಂಪಿ (BBMP) ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಈ ಹಿಂದೆಯೇ ಮಂತ್ರಿ ಮಾಲ್ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರೂ ತೇರಿಗೆ ಕಟ್ಟದ ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆಸ್ತಿ ತೆರಿಗೆ (Property Tax) ಕಟ್ಟದ ಹಿನ್ನೆಲೆಯಲ್ಲಿ ಮಾಲ್ನಲ್ಲಿರುವ ಕಚೇರಿ ವಸ್ತುಗಳನ್ನ ವಶಪಡಿಸಿಕೊಳ್ಳೋದಕ್ಕೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್
Advertisement
Advertisement
ಪೊಲೀಸ್ ಮತ್ತು ಮಾರ್ಷಲ್ ನೇತೃತ್ವದಲ್ಲಿ ದಿಢೀರ್ ದಾಳಿ ಮಾಡಿರುವ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಕಚೇರಿಯ ಲ್ಯಾಪ್ಟಾಪ್, ಕಂಪ್ಯೂಟರ್, ಚೇರ್, ಟೇಬಲ್, ಮ್ಯೂಯೆಬಲ್ ಸೇರಿದಂತೆ ಎಲ್ಲಾ ಯಂತ್ರೋಪಕರಣ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್ವೇರ್ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ
Advertisement
Advertisement
ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಯುಕ್ತ ಯೋಗೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಆಸ್ತಿ ತೆರಿಗೆ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಮಂತ್ರಿ ಮಾಲ್ 42. 63 ಕೋಟಿ ರೂ. ಬಾಕಿ ಉಳಿಸಿಕೊಂಡಿಸಿದೆ. ನೋಟಿಸ್ ಕೊಟ್ಟರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ದರಿಂದ ವಸ್ತುಗಳನ್ನ ವಶಪಡಿಸಿಕೊಳ್ಳೋದಕ್ಕೆ ಮುಂದಾಗಿದ್ದೇವೆ. ಚರಾಸ್ತಿಗಳ ಮೊತ್ತ ಎಷ್ಟಿದೆ ಎಂದು ಪರಿಶೋಧನೆ ಮಾಡುತ್ತಿದ್ದೇವೆ. ಮಾರ್ಗಸೂಚಿ ಪ್ರಕಾರವೇ ದಾಳಿ ಮಾಡಿದ್ದು, ಇನ್ನಷ್ಟು ವಸ್ತುಗಳನ್ನ ವಶಪಡಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಮಂತ್ರಿ ಮಾಲ್ ಮುಖ್ಯ ವ್ಯವಸ್ಥಾಪಕ ಶಬೀರ್ ಮಾತನಾಡಿ, ಆಸ್ತಿ ಉಳಿಸಿಕೊಂಡಿರೋದು ಅಭಿಷೇಕ್ ಡೆವಲಪರ್ಸ್. ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿಲ್ಲ. ಬಿಬಿಎಂಪಿ ದಾಳಿ ಮಾಡ್ತಿರೋದು ಕಾನೂನು ಬಾಹಿರ. ನಾವು ಕೋರ್ಟ್ನಿಂದ ತಡೆಯಾಜ್ಞೆ ಕೂಡಾ ತಂದಿದ್ದೇವೆ. ಏಕಾಏಕಿ ಈ ರೀತಿ ಮಾಡಿರೋದು ಸರಿಯಲ್ಲ. ನಾವು ಕೋರ್ಟಿಗೆ ಹೋಗ್ತೇವೆ ಎಂದಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k