407 ಸಿನಿಮಾ ಹೆಸರನ್ನು ಬಳಸಿ ಸ್ಟಾರ್ ನಟನ ಭಾವಚಿತ್ರ – ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಅಭಿಮಾನಿ ಹೆಸರು

Public TV
2 Min Read
mammutti

ಮುಂಬೈ: ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟರ ಫೋಟೋ, ಕಟೌಟ್‍ಗಳಿಗೆ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವ ಮೂಲಕ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸುವುದನ್ನು ನೋಡಿರುತ್ತೇವೆ. ಆದರೆ ಕೇರಳದ ವ್ಯಕ್ತಿಯೊಬ್ಬರು 407 ಸಿನಿಮಾಗಳ ಹೆಸರನ್ನು ಬರೆಯುವ ಮೂಲಕ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಬಿಡಿಸಿದ್ದಾರೆ.

mammutty 3

ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಮಮ್ಮುಟ್ಟಿ ಕೂಡ ಒಬ್ಬರಾಗಿದ್ದು, ಅವರು ತಮ್ಮದೇ ಆದ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಕೇರಳದ ಮಲಪ್ಪುರಂನ ಅರ್ಷದ್ ಎಂಬ ಅಭಿಮಾನಿ 407 ಸಿನಿಮಾದ ಹೆಸರುಗಳನ್ನು ಬಳಸಿಕೊಂಡು, ಅಕ್ಷರಗಳ ಮೂಲಕ ಭಾವಚಿತ್ರವನ್ನು ಬಿಡಿಸಿದ್ದಾರೆ.

mammutty 4

ಸರಳವಾಗಿ ಹೇಳುವುದಾದರೆ ಪದಗಳನ್ನು ಅಥವಾ ಅಕ್ಷರಗಳನ್ನು ಬಳಸಿ ರಚಿಸಿದ ಚಿತ್ರಕಲೆ ಎಂದೇ ಹೇಳಬಹುದು. ಈ ಚಿತ್ರಕಲೆಯನ್ನು ಬಿಡಿಸಿದ ಅರ್ಷದ್ ಇದೀಗ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್(ಎಬಿಆರ್) ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಸ್ಥಾನ ಗಳಿಸಿದ್ದು, ದಾಖಲೆಯ ಪುಸ್ತಕಕ್ಕೆ ಇವರ ಹೆಸರನ್ನು ಸೇರಿಸಲಾಗಿದೆ. ಜೊತೆಗೆ ಎಬಿಆರ್ ಕಡೆಯಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

mammutty

ಕೇವಲ ಮಲಯಾಳಂ ಮಾತ್ರವಲ್ಲದೇ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೂಡ ಅಕ್ಷರವನ್ನು ಭಾವಚಿತ್ರದಲ್ಲಿ ಮುದ್ರಿಸಲಾಗಿದೆ. ಜೊತೆಗೆ ಈ ಭಾವ ಚಿತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅರ್ಷದ್, ನಾನು ಮುಮ್ಮಟ್ಟಿಯವರ ದೊಡ್ಡ ಅಭಿಮಾನಿ, ಅವರ ಚಲನಚಿತ್ರಗಳ 407 ಹೆಸರನ್ನು ಐದು ಭಾಷೆಯಲ್ಲಿ ಬರೆಯಲು ನಿರ್ಧರಿಸಿ ಭಾವಚಿತ್ರವನ್ನು ಬಿಡಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು : ಜಾಕ್ವೆಲಿನ್ ಫರ್ನಾಂಡಿಸ್

Share This Article
Leave a Comment

Leave a Reply

Your email address will not be published. Required fields are marked *