– ಮೂರು ಕ್ಷೇತ್ರ ಬೇಡ ಅಂದಿದ್ಯಾಕೆ?
ಲಕ್ನೋ: 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ 400 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ.
ಖಾಸಗಿ ವಾಹಿನಿಯ ಸಂವಾದದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಖಿಲೇಶ್ ಯಾದವ್ ಹಲವು ರಾಜಕೀಯ ವಿಚಾರಗಳನ್ನು ಹಂಚಿಕೊಂಡರು. ಈ ಸಂವಾದದಲ್ಲಿ 400 ಕ್ಷೇತ್ರಗಳನ್ನು ಗೆಲ್ಲುವ ತಮ್ಮ ಗುರಿಯನ್ನು ಹೇಳಿಕೊಂಡರು. ಸಣ್ಣ ಪಕ್ಷಗಳ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಚಿಂತನೆಯಲ್ಲಿದ್ದೇವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚಿಕ್ಕ ಪಕ್ಷ. ಈ ಮೊದಲು ದೊಡ್ಡ ಪಕ್ಷಗಳ ಜೊತೆ ಮಾಡಿಕೊಂಡಿದ್ದ ಮೈತ್ರಿ ಲಾಭದಾಯಕವಾಗಿರಲಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಸದ್ಯ ಹಲವು ಸ್ಥಳೀಯ ಪಕ್ಷದ ನಾಯಕರ ಜೊತೆ ಸಭೆ ನಡೆಯುತ್ತಿದ್ದು, ಯಾವುದೂ ಅಂತಿಮಗೊಂಡಿಲ್ಲ. ಈ ಸಂದರ್ಭದಲ್ಲಿ ಯಾರ ಜೊತೆ ಚರ್ಚೆ ನಡೆತಯುತ್ತಿದೆ ಎಂದು ಹೇಳಲಾರೆ. ನಮ್ಮ ರಾಜಕೀಯ ರಣನೀತಿಗಳನ್ನು ರಿವೀಲ್ ಮಾಡಲ್ಲ. ಕಾರಣ ಬಿಜೆಪಿಯವರು ತುಂಬಾನೇ ಚಾಲಾಕಿಗಳು ಎಂದು ವಿರೋಧಿ ಬಣ ಬಲಿಷ್ಠವಾಗಿರೋದನ್ನು ಪರೋಕ್ಷವಾಗಿ ಅಖಿಲೇಶ್ ಯಾದವ್ ಒಪ್ಪಿಕೊಂಡರು.
Advertisement
Advertisement
ಚಿಕ್ಕಪ್ಪ ಶಿವಪಾಲ್ ಅವರಿಗಾಗಿ ಜಸ್ವಂತ್ ನಗರ ಸೀಟ್ ಬಿಟ್ಟುಕೊಡಲಾಗಿದೆ. ಇನ್ನು ಅವರ ಬೆಂಬಲಿಗರಿಗೆ ಎಷ್ಟು ಕ್ಷೇತ್ರ ನೀಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿಲ್ಲ. ಚುನಾವಣೆ ಪೂರ್ವ ಮೈತ್ರಿ ಬಳಿಕ ಪರಿಸ್ಥಿತಿ ಮತ್ತು ಪಕ್ಷಗಳ ಹೊಂದಾಣಿಕೆ ಮೇಲೆ ಕ್ಷೇತ್ರಗಳನ್ನು ಹಂಚಿಕೊಳ್ಳುತ್ತೇವೆ. 403ರಲ್ಲಿ 400 ಸ್ಥಾನಗಳಲ್ಲಿ ಗೆಲ್ಲೋದು ನಮ್ಮ ಗುರಿ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಬೇಕು. ಹಾಗಾಗಿ ಇನ್ನುಳಿದ ಮೂರು ಕ್ಷೇತ್ರಗಳನ್ನು ನೀಡುತ್ತೇವೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಬ್ರೇಕ್ಫಾಸ್ಟ್ ಮೀಟಿಂಗ್ – ಸಂಸತ್ವರೆಗೂ ಸೈಕಲ್ ಮಾರ್ಚ್
ರಾಜ್ಯದ ಜನತೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಚುನಾವಣೆಗೋಸ್ಕರ ಕಾಯುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಲಾಭ ಆಗಲಿಲ್ಲ. ಜನ ಈ ಸರ್ಕಾರ ಕಿತ್ತೊಗೆಯಲು ಸಂಕಲ್ಪ ಮಾಡಿದ್ದು, ಮತದಾನಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ಉತ್ತರ ಪ್ರದೇಶ ಬೃಹತ್ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಪವರ್ ಫುಲ್ ಖಾತೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ರೆಬಲ್ಗಳ ರಹಸ್ಯ ಸಭೆ!