– ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೆಡ್ ಜೆರ್ಸಿ ಬದಲು ವೈಟ್ ಜೆರ್ಸಿ ಅಬ್ಬರ
– ಟ್ರಿಬ್ಯೂಟ್ ಟು ದಿ ಕಿಂಗ್ ಕೊಹ್ಲಿ ನಂ.18
ಬೆಂಗಳೂರು: ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ಬೈ ಹೇಳಿದ ಕಿಂಗ್ ಕೊಹ್ಲಿಗೆ ಶನಿವಾರ ಬೆಂಗಳೂರಿನ(Bengaluru) ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ(Chinnaswamy Stadium) ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಗೌರವ ಕೊಡಲು ರೆಡಿಯಾಗಿದ್ದಾರೆ.
ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ(Virat Kohli) ರನ್ ಹಸಿವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಾಗಲೇ ವೈಟ್ ಜೆರ್ಸಿ ಕ್ರಿಕೆಟ್‌ಗೆ ವಿದಾಯ ಹೇಳಿಬಿಟ್ಟಿದ್ದ ಕೊಹ್ಲಿಗೆ ಕೊನೆ ಪಕ್ಷ ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದ್ರೆ ಅದೂ ಆಗಲಿಲ್ಲ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್ ನಾಳೆ ನಡೆಯುವ ಮ್ಯಾಚ್‌ಗೆ ನಂಬರ್ 18ರ ವೈಟ್ ಜೆರ್ಸಿ(White Jersy) ಧರಿಸಿ ಕೊಹ್ಲಿಗೆ ಗೌರವ ನೀಡಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಎ ತಂಡ ಪ್ರಕಟ
ಇಂಡಿಯಾ ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಕಿಂಗ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್‌ನ ವಿದಾಯದ ಸುದ್ದಿ ಕೋಟ್ಯಂತರ ಅಭಿಮಾನಿಗಳಿಗೆ ಬರಸಿಡಿಲು ಬಂದಂತೆ ಎರಗಿತ್ತು. ಇನ್ನೂ ನಾಲ್ಕೈದು ವರ್ಷಗಳ ಕಾಲ ಕ್ರಿಕೆಟ್ ಆಡುವಷ್ಟು ಸಾಮರ್ಥ್ಯವಿದ್ದರೂ ವಿರಾಟ್ ದೃಢ ನಿರ್ಧಾರ ಮಾಡಿ ನಿವೃತ್ತಿ ಘೋಷಿಸಿದ್ದಾರೆ. 124 ಟೆಸ್ಟ್ ಮ್ಯಾಚ್‌ಗಳಲ್ಲಿ 9,230 ರನ್ ಹೊಡೆದಿದ್ದ ಕೊಹ್ಲಿಗೆ 770 ರನ್ ಗಳಿಸಿದರೆ 10000 ರನ್‌ಗಳ ಸರದಾರನಾಗುತ್ತಿದ್ದರು. ಆದರೆ ದಾಖಲೆಗೆ ತಲೆಕೆಡಿಸಕೊಳ್ಳದ ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?
ಬಿಸಿಸಿಐ ಆದರೂ ಒಂದು ಟೆಸ್ಟ್ ಮ್ಯಾಚ್ ಆಡುವಂತೆ ವಿನಂತಿ ಮಾಡಿ, ವಿದಾಯದ ಬೀಳ್ಕೊಡುಗೆ ಮಾಡಬಹುದಿತ್ತು ಅದನ್ನೂ ಮಾಡಲಿಲ್ಲ. ಇದೀಗ ಅಭಿಮಾನಿಗಳು, ಬಿಸಿಸಿಐ ಬೀಳ್ಕೊಡುಗೆ ಕೊಡಲಿಲ್ಲ ಅಂದರೆ ಏನಂತೆ ನಾವು ಕೊಡ್ತೀವಿ ಅಂತಾ ಸಜ್ಜಾಗಿದ್ದಾರೆ.
ಭಾರತ ಪಾಕ್ ಸಂಘರ್ಷದಿಂದ ನಿಂತಿದ್ದ ಐಪಿಎಲ್(IPL) ಶನಿವಾರದಿಂದ ಮತ್ತೆ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ಮತ್ತು ಆರ್‌ಸಿಬಿ(RCB) ನಡುವೆ ಮ್ಯಾಚ್ ನಡೆಯಲಿದೆ. ಆರ್‌ಸಿಬಿಯ ಪಂದ್ಯಕ್ಕೆ ರೆಡ್ ಜೆರ್ಸಿ ಧರಿಸಿ ಎಂಟ್ರಿ ಕೊಡ್ತಿದ್ದ ಫ್ಯಾನ್ಸ್ ನಾಳೆ ಕೊಹ್ಲಿಗಾಗಿ ನಂ. 18ರ ವೈಟ್ ಜೆರ್ಸಿ ಧರಿಸಿ ಸ್ಟೇಡಿಯಂಗೆ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್!
ಆ ಮೂಲಕ ಇಡೀ ಚಿನ್ನಸ್ವಾಮಿ ಸ್ಟೇಡಿಯಂನ 40,000 ಪ್ರೇಕ್ಷಕರು ವೈಟ್ ಅಂಡ್ ವೈಟ್‌ನಲ್ಲಿ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್‌ನ ವಿದಾಯದ ಬೀಳ್ಕೊಡುಗೆ ನೀಡಲಿದ್ದಾರೆ. ದೇಶಕ್ಕಾಗಿ ರನ್ ಮಳೆಯನ್ನೇ ಹರಿಸಿ, ತನ್ನ ಅಗ್ರೆಶನ್‌ನಿಂದ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ ನಿಸ್ವಾರ್ಥ ಆಟಗಾರನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಒಟ್ಟಿನಲ್ಲಿ ಇಡೀ ಸ್ಟೇಡಿಯಂನ ವೈಟ್ ಅಂಡ್ ವೈಟ್‌ನಲ್ಲಿ ನೋಡೋದು ನಿಜಕ್ಕೂ ಅಚ್ಚರಿಯೇ ಸರಿ. ಇದು ಕಿಂಗ್ ಕೊಹ್ಲಿ ಗಳಿಸಿದ ಆಗಾಧ ಸಂಪತ್ತು.